ಶಿಕ್ಷಣ, ವೈದ್ಯಕೀಯ, ಎಂಜಿನಿಯರಿಂಗ್, ಆಡಳಿತ, ರಾಜಕೀಯ... ಹೀಗೆ ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿರುವ ಮಹಿಳೆ ವ್ಯಾಪಾರ-ವ್ಯವಹಾರದ ವಿಷಯಕ್ಕೆ ಬಂದಾಗ ಎಲ್ಲೊ ಒಂದು ಕಡೆ ಅನುಮಾನಿಸುವುದುಂಟು.

ಅವಳಲ್ಲಿ ಎಷ್ಟೇ ಸಾಮರ್ಥ್ಯವಿದ್ದರೂ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಹಾಗೂ ಪೂರೈಕೆಗೆ ಸಾಕಷ್ಟು ಬೇಡಿಕೆಯನ್ನು ಪಡೆಯುವಲ್ಲಿ ಮಹಿಳಾ ಉದ್ಯಮಿಗೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ.

ಆದರೆ ಇದಕ್ಕೆ ಅಪವಾದ ಎನ್ನುವಂತೆ `ನೇರ ಮಾರಾಟ~ದ ಪರಿಕಲ್ಪನೆಯೊಂದಿಗೆ `ಗ್ರಾಹಕರಿಂದ ಗ್ರಾಹಕರಿಗಾಗಿ~ ಎಂಬ ಘೋಷಣೆಯ ಮೂಲಕ ಮಾರುಕಟ್ಟೆಯಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ ಉಡುಪಿ ಮೂಲದ ಲಲಿತಾ ರಾವ್ ಸಾಹಿಬ್.

ಒಬ್ಬ ಮಹಿಳೆ ಮನೆಯಲ್ಲಿ ಆರಂಭಿಸಿದ ಆಹಾರ ಉದ್ಯಮವೊಂದು ಪ್ರತಿ ತಿಂಗಳು ಸುಮಾರು 50ರಿಂದ 70 ಲಕ್ಷದವರೆಗೆ ವ್ಯವಹಾರ ನಡೆಸುವಷ್ಟು ಬೃಹತ್ ಮಟ್ಟದಲ್ಲಿ ಬೆಳೆದದ್ದು ಸುಲಭದ ದಾರಿ ಏನಲ್ಲ.

ಅಂತೆಯೇ ಅವರು ಆರಂಭಿಸಿದ `ಮೈ ಫ್ಯಾಮಿಲಿ ಬಿಝ್~ ಈಗ ಗೃಹಿಣಿಯರ ಹಾಗೂ ಉದ್ಯೋಗಸ್ಥ ಮಹಿಳೆಯರ ನೆಚ್ಚಿನ ಉತ್ಪನ್ನವಾಗಿದೆ. ತಮ್ಮ ಕುಟುಂಬಕ್ಕೆ ಅತ್ಯುನ್ನತ ಗುಣಮಟ್ಟದ ಆಹಾರ ಪೂರೈಸುವ ಜೊತೆಗೆ ಒಂದಷ್ಟು ಉಳಿತಾಯ, ಮತ್ತಷ್ಟು ಗಳಿಕೆ ಮಾಡುವುದು ಇದರಿಂದ ಸಾಧ್ಯ.

ಏನಿದು ಮೈ ಫ್ಯಾಮಿಲಿ ಬಿಝ್...

1999ರಲ್ಲಿ ಲಲಿತಾ ರಾವ್ ಸಾಹಿಬ್ `ಮೈ ಫ್ಯಾಮಿಲಿ ಬಿಝ್~ ಎನ್ನುವ ಸಿದ್ಧ ಆಹಾರ ಉತ್ಪನ್ನ ಉದ್ಯಮವೊಂದನ್ನು ಆರಂಭಿಸಿದರು. ಮಹಿಳೆಯರನ್ನೇ ಕೇಂದ್ರವಾಗಿಟ್ಟುಕೊಂಡು ಆರಂಭಿಸಲಾದ ಈ ಉದ್ಯಮದ ಮುಖ್ಯ ಗುರಿ ಎಂದರೆ ತಾವು ತಯಾರಿಸಿದ ಸಿದ್ಧ ಆಹಾರ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವುದು. ಜೊತೆಗೆ ಎಲ್ಲಾ ಸದಸ್ಯ ಗ್ರಾಹಕರೂ ಈ ಮೂಲಕ ಲಾಭ ಪಡೆದುಕೊಳ್ಳುವಂತೆ ಮಾಡುವುದು.

ಯಾವ ಶ್ರಮವೂ ಇಲ್ಲದೇ, ಬಂಡವಾಳದ ಅಗತ್ಯವೂ ಇಲ್ಲದೇ, ಬರೀ ಅಡುಗೆ ಮಾಡುವ ಜೊತೆಗೆ ಉಳಿತಾಯ ಹಾಗೂ ಗಳಿಕೆ ಮಾಡುವುದು ಹೇಗೆ ಎಂಬುದನ್ನು ಅವರು ಗೃಹಿಣಿಯರಿಗೆ ತೋರಿಸಿಕೊಟ್ಟಿದ್ದಾರೆ.

ಅಡುಗೆ ಮನೆಯಲ್ಲಿ ನಿಮ್ಮ ಮನೆಯವರ ಮೆಚ್ಚುಗೆಯ ಅಡುಗೆ ಪ್ರಕಾರವನ್ನು ಚಿಟಿಕೆ ಹೊಡೆಯುವ ಸಮಯದಲ್ಲೇ ಮಾಡಿ ಮುಗಿಸುವ ತೃಪ್ತಿಯೊಂದಿಗೆ ಬಾಯಿಯಿಂದ ಬಾಯಿಗೆ ಒಂದು ಸುದ್ದಿಯನ್ನು ಹರಡಿಸುವ ಮೂಲಕ ನಾಲ್ಕು ಕಾಸು ಕೂಡ ಮಾಡಿಕೊಳ್ಳಬಹುದು.

`ಗೃಹಿಣಿಯರಿಗೆ, ಉದ್ಯೋಗಸ್ಥ ಮಹಿಳೆಯರಿಗೆ, ಸ್ವ-ಉದ್ಯೋಗಿಗಳಿಗೆ ವಿದ್ಯಾರ್ಥಿಗಳಿಗೆ... ಹೀಗೆ ಎಲ್ಲಾ ವರ್ಗದ ಮಹಿಳೆಯರಿಗೂ ಅನುಕೂಲವಾಗುವಂತೆ ಹಾಗೂ ಆರ್ಥಿಕವಾಗಿಯೂ ಅವರಿಗೆ ನೆರವಾಗುವಂತೆ `ಮೈ ಫ್ಯಾಮಿಲಿ ಬಿಝ್~ ಯೋಜನೆಯನ್ನು ರೂಪಿಸಲಾಗಿದೆ. ಅವರು `ಉಡುಪಿ ರುಚಿ~ ಹೆಸರಲ್ಲಿ ತಯಾರಿಸುವ ದಿಢೀರ್ ಅಡುಗೆ ಉತ್ಪನ್ನಗಳು ಈ ಯೋಜನೆಯಡಿ ಸದಸ್ಯರಾದವರಿಗೆ ಮಾತ್ರ ಲಭ್ಯ.

ಯಾವುದೇ ರೀತಿಯಿಂದ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡದ ಇವೆಲ್ಲಾ 100% ನೈಸರ್ಗಿಕವಾಗಿ ತಯಾರಿಸಿದಂತಹವು. ಬೋಂಡಾ, ವಡಾ, ವಾಂಗಿ ಬಾತ್, ಕೇಸರಿ ಬಾತ್, ಬಿಸಿಬೇಳೆ ಬಾತ್, ಉಪಮಾ, ರವೆ ಇಡ್ಲಿ, ರವೆ ದೋಸಾ, ಕೀರ್, ಜಾಮೂನ್, ಸೂಪ್ನಂತಹ ಸಿದ್ಧ ಆಹಾರ ಮಿಕ್ಸ್ಗಳ ಜೊತೆಗೆ ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ವಿಶೇಷವಾಗಿ ತಯಾರಿಸಲಾದ ಹೆಲ್ತ್ ಡ್ರಿಂಕ್ಸ್ ಇಲ್ಲಿ ಲಭ್ಯ.

ಸದಸ್ಯತ್ವ ಹೇಗೆ?
ಬಿಜ್ನ ಯಾವುದೇ ಸ್ಟಾಕ್ ಪಾಯಿಂಟ್ನಲ್ಲಿ 600 ರೂಪಾಯಿ ಸದಸ್ಯತ್ವ ಶುಲ್ಕದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ `ಫ್ಯಾಮಿಲಿ ಬಿಝ್~ನ ಯಾವುದೇ ಕೇಂದ್ರದಲ್ಲಿ ಅಥವಾ ಆನ್ಲೈನ್ ಮೂಲಕ ಸಿದ್ಧಆಹಾರ ಪದಾರ್ಥಗಳನ್ನು ಖರೀದಿಸಬಹುದು. ಇದರಿಂದ ನಿಮಗೆ ದೊರಕುವ ಪಾಯಿಂಟ್ಗಳು, ನಿಮ್ಮ ಖಾತೆ ಹಾಗೂ ಖಾತೆಯಲ್ಲಿ ಜಮಾ ಆಗಿರುವ ಮೊತ್ತವನ್ನು ನೀವು ಆನ್ಲೈನ್ ಮೂಲಕ ಪರೀಕ್ಷಿಸಬಹುದು.

ಲಾಭ ಹೇಗೆ?
ಯಾವುದೇ ಬಂಡವಾಳ ಅಥವಾ ನಷ್ಟದ ಅಪಾಯವಿಲ್ಲದೇ ಸುರಕ್ಷಿತ ಮಾರ್ಗವಾಗಿ ಆರಂಭವಾಗುವ ಈ ವ್ಯವಹಾರ ನಿಮಗೆ ಸಣ್ಣ-ಪುಟ್ಟ ಲಾಭಗಳನ್ನು ತಂದು ಕೊಡುತ್ತದೆ.
ಪ್ರತಿ ತಿಂಗಳು 24ರ ಒಳಗೆ ಕನಿಷ್ಠ 200 ರೂಪಾಯಿಯ ಆಹಾರ ಪದಾರ್ಥಗಳನ್ನು ಬಿಜ್ನಿಂದ ಖರೀದಿಸಬೇಕು.

ಆಗ ಕೆಲವಷ್ಟು ಪಾಯಿಂಟ್ಗಳು ಸಿಗುತ್ತವೆ. ಅಲ್ಲದೇ, ಸ್ನೇಹಿತರನ್ನು, ಬಂಧುಗಳನ್ನು ಈ ಫ್ಯಾಮಿಲಿಯ ಸದಸ್ಯತ್ವಕ್ಕೆ ತಂದಾಗಲೂ ಪಾಯಿಂಟ್ಗಳು ಸಿಗುತ್ತವೆ. ಈ ಪಾಯಿಂಟ್ಗಳು ತಿಂಗಳ ಕೊನೆಯಲ್ಲಿ ಗಳಿಕೆಯಾಗಿ ನಿಮ್ಮ ಖಾತೆಗೆ ಸೇರ್ಪಡೆಯಾಗುತ್ತವೆ.

ಹೆಣ್ಣುಮಕ್ಕಳಿಗೆ ಮಾತನಾಡುವುದು ಒಂದು ಕಲೆ. ಇಬ್ಬರು ಸೇರಿದಾಗ ಅವರು ಯಾವತ್ತೂ ಸುಮ್ಮನಿರುವುದಿಲ್ಲ. ಆದರೆ ಅಂತಹ ಮಾತುಗಳನ್ನು ಕೇವಲ ವ್ಯರ್ಥ ಗಾಸಿಪ್ಗೆ ಸೀಮಿತಗೊಳಿಸಿಕೊಳ್ಳದೇ ಉಪಯುಕ್ತ ಮಾರ್ಗದೆಡೆಗೆ ಬಳಸಿಕೊಳ್ಳಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎನ್ನುತ್ತಾರೆ ಲಲಿತಾ ರಾವ್ ಸಾಹಿಬ್.
ವಿಭಿನ್ನ ರುಚಿ ಹೊಂದಿದ ಈ ಆರೋಗ್ಯಕರ ಆಹಾರ ಪದಾರ್ಥಗಳನ್ನು ಅಡುಗೆಗೆ ಬಳಸುವುದರಿಂದ ಜೀವನ ಶೈಲಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ದೂರ ಇಡಬಹುದು. ಇದರೊಂದಿಗೆ ಶ್ರಮವಿಲ್ಲದೆ ನಾಲ್ಕು ಕಾಸು ಸಂಪಾದಿಸುವ ಸಾರ್ಥಕ್ಯವೂ ಮಹಿಳೆಯರಿಗೆ ಸಿಗಲಿದೆ ಎನ್ನುತ್ತಾರೆ ಲಲಿತಾ ಅವರು.

ಹೆಚ್ಚಿನ ಮಾಹಿತಿಗೆ: ವೆಬ್ಸೈಟ್ - www.myfamilybiz.in ದೂರವಾಣಿ- 080-41722169 ; ಇಮೇಲ್- support@myfamilybiz.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.