ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಂಗ್ಯಕ್ಕೆ ಪತ್ನಿಯೇ ಏಕೆ ಗುರಿ?

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಈ ಉದಾಹರಣೆಗಳನ್ನು ಗಮನಿಸಿ
ಮನೆಯ ಚಿತ್ರ: ಹೊರಗಿನ ಕುರ್ಚಿಯಲ್ಲಿ ಪತ್ನಿ ಪತ್ರಿಕೆ ಓದ್ತಿದ್ದಾಳೆ. ಒಳಗೆ ರುಬ್ಬುವ ಕಲ್ಲಿನೆದುರು ಕುಳಿತ ಗಂಡ ರುಬ್ಬುತ್ತಿದ್ದಾನೆ. ಇದು ಮಾತೇ ಅಗತ್ಯವಿಲ್ಲದ ವ್ಯಂಗ್ಯಚಿತ್ರ. ಮತ್ತು ಇಂಥಹುದೇ ಅರ್ಥದ ಹಲವಾರು ವ್ಯಂಗ್ಯಗಳು ಧಾರಾಳವಾಗಿರ್ತವೆ. ಪತ್ನಿ ಪತ್ರಿಕೆ, ಟಿ.ವಿ. ಎದುರಿಗೆ ಕುಳಿತರೆ ಅದರಲ್ಲಿ ವ್ಯಂಗ್ಯ ಏನಿದೆ? ಹೋಗಲಿ.

ಪತಿಯಾದವನು ರುಬ್ಬುವುದು ಅಸಹಜವೇ ಏಕೆ? ಬದಲಾಗಿ ಪತಿ ಕಾಲುಚಾಚಿ ಆರಾಮವಾಗಿರುವುದು, ಪತ್ನಿ ಅಡಿಗೆ ಮಾಡುವುದು ಸಹಜ ಚಿತ್ರಣವೆಂದೇಕೆ ಭಾವಿಸಬೇಕು. ಸಂಸಾರದಲ್ಲಿ ಸಹಕಾರ ಮುಖ್ಯ. ಯಾರು ಏನು ಮಾಡಿದರು ಎಂಬುದಲ್ಲ.

ಮತ್ತೊಂದು ಸವಕಲಾದ ಚಿತ್ರಣ:  ಸಿಟ್ಟಿನಿಂದ ಹಲ್ಲುಮುಡಿ ಕಚ್ಚಿ ಹುಬ್ಬುಗಂಟಿಕ್ಕಿ ಕೈಲಿ ಲಟ್ಟಣಿಗೆ ಹಿಡಿದು ನಿಂತ ಪತ್ನಿ. ಮೂಲೆಯಲ್ಲಿ ಪೆಚ್ಚುಮೋರೆ ಹಾಕಿ ನಿಂತ ಪತಿಯ ನೆತ್ತಿಯಲ್ಲಿ ಬುಗುಟೆ ಬಂದು ಉಬ್ಬಿದ ಗುರುತು ನೋಡಿ ನೋಡಿ ಹಳಸಲಾದರೂ ಈ ಚಿತ್ರಗಳು ಜನಪ್ರಿಯ ವ್ಯಂಗ್ಯಚಿತ್ರಗಳು. ಪತ್ನಿ ಲಟ್ಟಣಿಗೆಯಿಂದ ಹೊಡೆದರೆ ಗಂಡನ ತಲೆ ಉಳಿದೀತೇ? ಇದು ವ್ಯಂಗ್ಯಚಿತ್ರ. ಹಾಗಿದ್ದರೆ ಅನೇಕ ಸಂದರ್ಭ, ಸನ್ನಿವೇಶಗಳಲ್ಲಿ ಪತಿ ಪತ್ನಿಗೆ ಶಾರೀರಿಕ ದೌರ್ಜನ್ಯವೆಸಗುವುದು ಉಂಟು. ಕುಡಿದು ಬಂದ ಪತಿ ಹೆಂಡತಿಯ ಬೆನ್ನು ಮೂಳೆ ಮುರಿಯುವುದು ಇದೆಲ್ಲ ಸಹಜವೇ?

ವಧು ಪರೀಕ್ಷೆಯ ಸಂದರ್ಭ: ಹೆಣ್ಣಿನ ಅಪ್ಪ ಅಳಿಯನಾಗುವವನಲ್ಲಿ `ಅಡುಗೆ ಬರುತ್ತದಾ?~ ಎಂದು ವಿಚಾರಿಸುವುದು. ಇಲ್ಲಿ ತಾನೇ ಅಡಿಗೆ ಮಾಡ್ತೇನೆಎಂಬ ವಿವರ ಬೇರೆ.

ಬಟ್ಟೆ ಒಗೆದು ಸೀರೆ ಒಣಹಾಕುವ ಪತಿ; ಸ್ನೇಹಿತೆಯೊಂದಿಗೆ ಹರಟೆ ಹೊಡೆಯುವ ಪತ್ನಿ.
ಲಘು ಹಾಸ್ಯ ಎನ್ನಬಹುದೆ? ಇದೆಲ್ಲ ಲಘು ಹಾಸ್ಯ ಎನ್ನಬಹುದು ಇದನ್ನು ಎಂಜಾಯ್ ಮಾಡುವವರು. ಆದರೆ ಪತ್ನಿಯೇ ಒಗೆತ, ಅಡುಗೆ, ಕೆಲಸ (ಮನೆ) ಮಾಡಬೇಕಾದ್ದು; ಪತಿಯಾದವನು ಹಾಯಾಗಿ ಕುಳಿತುಕೊಂಡಿರಬೇಕಾದವನು ಎಂಬ ಚಿತ್ರಣ, ಸಂದೇಶವನ್ನು ಇಂಥ ವ್ಯಂಗ್ಯ ಚಿತ್ರಗಳು ಕೊಡುವುದಿಲ್ಲವೇ?

ಇನ್ನು ನಗೆಹನಿಗಳಾದರೂ ಅಷ್ಟೇ. ಸಲೀಸಾಗಿ ಇವರಿಗೆ ಸಿಗುವುದು ಹೆಂಗಸರೇ.

* ಆಭರಣ, ಸೀರೆ ಅಂಗಡಿ ಎದುರಾಗುವಾಗ ಅದನ್ನು ಕಾಣದಂತೆ ಅಡ್ಡಲಾಗಿ ನಿಂತುಕೊಳ್ಳುವ ಪತಿ,

* ಪತ್ನಿ ಕಳೆದು ಹೋಗಿದ್ದಾಗಿನ ಸಂದರ್ಭ, ಜಾಹೀರಾತು ಕೊಡುವ ಪತಿ ಪತ್ನಿಯ ವಿವರಕ್ಕೆ ಬದಲು ಸುಂದರ ಕನ್ಯೆಯ ಚಿತ್ರಣ (ವಿವರ) ನೀಡುವುದು.

* ಪತ್ನಿಯ ತಾಯಿ ಅತಿಥಿಯಾಗಿ ಮನೆಗೆ ಬರುತ್ತಾರೆಂಬ ವಿಷಯ ಕೇಳಿ ಮೂರ್ಛೆ ಹೋಗುವ ಪತಿ.

* ಪತಿಯ ಸಾವಿಗೆ ಪತ್ರಿಕೆಯಲ್ಲಿ ಶ್ರದ್ಧಾಂಜಲಿ ಹಾಕಿಸಿದ ಪತ್ನಿ ಕೊನೆಗೆ ತನ್ನ ಹೆಸರು, ಸಂಬಂಧದೊಂದಿಗೆ ವಯಸ್ಸು, ಎತ್ತರ, 36/24/36, ಕೆಂಪು ಬಣ್ಣ. ಮಕ್ಕಳಿಲ್ಲ ಅಂತ ಹಾಕಿಸ್ಕೊಳ್ಳುವುದು.

* ಅಪ್ಪ ನೀನಿಲ್ಲದಾಗ ಕೆಲಸದವಳಿಗೆ ಮುತ್ತು ಕೊಡುತ್ತಾನೆಂದು ಮಗ ಅಮ್ಮನಿಗೆ ಹೇಳುವುದು.

ಹಾಸ್ಯ ಬೇಕು. ಅದು ಲಘುಹಾಸ್ಯವಾಗಿರಬೇಕು. ಆದರೆ ನಾ ಕಂಡಂತೆ ಹೆಚ್ಚಿನ ವ್ಯಂಗ್ಯಚಿತ್ರಗಳು, ಹಾಸ್ಯಚಟಾಕಿಗಳಿಗೆ ಆಹಾರವಾಗುವುದು ಪತ್ನಿ. ಆಕೆಯ ಬಗ್ಗೆ ತಾತ್ಸರದ ವರ್ತನೆ. ಇದು ಹಾಸ್ಯ! ಅದೇ ಪತ್ನಿ ಗಂಡನ ಬಗ್ಗೆ ತಾತ್ಸರ ಮಾಡಿದರೆ, ಕೆಲಸದವರಿಗೆ ಮುತ್ತಿಡುವಂತೆ ಹಾಸ್ಯ ಇದ್ರೆ ಅಲ್ಲಿ ಹಾಸ್ಯ ವಿಕೋಪಕ್ಕೇ ಹೋಗಬಹುದು. ಇಷ್ಟಕ್ಕೂ ಹಾಸ್ಯ, ವ್ಯಂಗ್ಯಚಿತ್ರವಲ್ಲವೇ ಅದು. ಅದಕ್ಕೇಕೆ ಇಷ್ಟೆಲ್ಲ ಅಸಮಾಧಾನ ಎನ್ನುತ್ತೀರಾ? ಒಪ್ಪಿಕೊಳ್ಳಬಹುದು. ಆದರೆ ಪತ್ನಿಯಂತೇ ಅದಕ್ಕೆಲ್ಲ ಪತಿಯೂ ಆಹಾರವಾಗುವಂತಿದ್ದರೇ ಸರಿ. ತಕ್ಕಡಿ ಒಂದೇ ಬದಿಗೆ ಹೆಚ್ಚು ಭಾರ ಬೀಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT