ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾದ ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿ: 13 ಮಂದಿ ಸಾವು

Last Updated 13 ಜೂನ್ 2021, 6:12 IST
ಅಕ್ಷರ ಗಾತ್ರ

ಬೈರೂತ್: ಟರ್ಕಿ ಬೆಂಬಲಿತ ಹೋರಾಟಗಾರರ ನಿಯಂತ್ರಣದಲ್ಲಿರುವ ಉತ್ತರ ಸಿರಿಯಾದ ಆಸ್ಪತ್ರೆಯೊಂದರ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಇದರಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

‘ಆಫ್ರಿನ್‌ ಪಟ್ಟಣದಲ್ಲಿರುವ ಅಲ್‌–ಶಿಫಾ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ಎರಡು ಕ್ಷಿಪಣಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಆಸ್ಪತ್ರೆ ಸಿಬ್ಬಂದಿ, ಆಂಬುಲೆನ್ಸ್‌ನ ಇಬ್ಬರು ಚಾಲಕರು ಸೇರಿದಂತೆ 13 ಮಂದಿ ಸಾವಿಗೀಡಾಗಿದ್ದಾರೆ. ಪಾಲಿಕ್ಲಿನಿಕ್‌ ವಿಭಾಗ, ತುರ್ತು ಪರಿಸ್ಥಿತಿ ಹಾಗೂ ವಿತರಣಾ ಕೊಠಡಿ ನಾಶಗೊಂಡಿವೆ. ಆಸ್ಪತ್ರೆಯಿಂದ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ದಿ ಸಿರಿಯನ್‌ ಅಮೆರಿಕನ್‌ ಮೆಡಿಕಲ್‌ ಸೊಸೈಟಿ(ಎಸ್‌ಎಎಂಎಸ್‌) ಹೇಳಿದೆ.

ಈ ದಾಳಿಯನ್ನು ಯಾರು ನಡೆಸಿದ್ದಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. ಆದರೆ ಸರ್ಕಾರಿ ಪಡೆ ಮತ್ತು ಕುರ್ದಿಶ್‌ ಸಮೂಹ ನಿಯೋಜನೆಗೊಂಡಿರುವ ಪ್ರದೇಶದಿಂದ ಈ ದಾಳಿ ನಡೆದಿದೆ.

‘ಆಸ್ಪತ್ರೆಯ ಮೇಲೆ ಶನಿವಾರ ರಾಕೆಟ್‌ ಮತ್ತು ಫಿರಂಗಿ ಶೆಲ್‌ಗಳ ದಾಳಿ ನಡೆದಿದೆ. ಇದರಲ್ಲಿ 13 ಮಂದಿ ಮೃತಪಟ್ಟಿದ್ದು, 27 ಮಂದಿಗೆ ಗಾಯಗಳಾಗಿವೆ. ಈ ದಾಳಿಯನ್ನು ಸಿರಿಯಾದ ಕುರ್ದಿಶ್‌ ಸಮೂಹ ನಡೆಸಿದೆ’ ಎಂದು ಟರ್ಕಿಯ ಹತಯಾಸ್‌ ಪ್ರಾಂತ್ಯದ ಗವರ್ನರ್‌ ದೂರಿದ್ದಾರೆ.

ಬ್ರಿಟನ್‌ ಮೂಲದ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯವು ಈ ದಾಳಿಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT