ಬುಧವಾರ, ಸೆಪ್ಟೆಂಬರ್ 28, 2022
27 °C

ಆಗಸ್ಟ್‌ 15 ಅನ್ನು ‘ಭಾರತದ ದಿನ’ ಎಂದು ಘೋಷಿಸಿದ ಅಮೆರಿಕದ ಮೂರು ರಾಜ್ಯಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಅಮೆರಿಕದ ಮೆಸಾಚುಸೆಟ್ಸ್, ರೋಡ್ ಐಲ್ಯಾಂಡ್ ಮತ್ತು ನ್ಯೂ ಹ್ಯಾಂಪ್‌ಶೈರ್ ರಾಜ್ಯಗಳು ಆಗಸ್ಟ್ 15 ಅನ್ನು ‘ಭಾರತದ ದಿನ’ ಎಂದು ಘೋಷಿಸಿವೆ.

‘ಯುವ ದೇಶವು ತನ್ನ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಆಧುನಿಕ ಭಾರತವು ಸ್ವಾತಂತ್ರ್ಯದ ನಂತರ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ತಂತ್ರಜ್ಞಾನದಲ್ಲಿ ಅಗಾಧ ಬೆಳವಣಿಗೆಯನ್ನು ತೋರಿಸಿದೆ’ ಎಂದು ಮೆಸಾಚುಸೆಟ್ಸ್‌ ಗವರ್ನರ್ ಸಿ. ಬೇಕರ್ ಹೇಳಿದ್ದಾರೆ. ರೋಡ್ ಐಲೆಂಡ್ ಗವರ್ನರ್ ಡೇನಿಯಲ್ ಮೆಕ್ಕಿ ಮತ್ತು ನ್ಯೂ ಹ್ಯಾಂಪ್‌ಶೈರ್ ಗವರ್ನರ್ ಕ್ರಿಸ್ಟೋಫರ್‌ ಟಿ. ಸುನುನು ಅವರು ಸಹ ಇಂತಹದೇ ಹೇಳಿಕೆಗಳೊಂದಿಗೆ ಭಾರತದ ಮಹತ್ವವನ್ನು ಕೊಂಡಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು