ಬುಧವಾರ, ನವೆಂಬರ್ 25, 2020
19 °C

ಫಿಲಿಪ್ಪೀನ್ಸ್‌: ಚಂಡಮಾರುತದಿಂದಾಗಿ 42 ಸಾವು, 32 ಮಂದಿ ನಾಪತ್ತೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಮನಿಲಾ: ಫಿಲಿಪ್ಪೀನ್ಸ್‌ನಲ್ಲಿ ಬುಧವಾರ ತಡರಾತ್ರಿ ಅಪ್ಪಳಿಸಿದ ವಾಮ್ಕೊ ಚಂಡಮಾರುತದಿಂದಾಗಿ 42 ಮಂದಿ ಮೃತಪಟ್ಟಿದ್ದು, 32 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಮನಿಲಾದಲ್ಲಿ ಚಂಡಮಾರುತದಿಂದಾಗಿ ಮನೆಗಳು ಭಾಗಶಃ ಹಾನಿಗೊಳಗಾಗಿದ್ದು,ಮನೆಗಳ ಸುತ್ತಲೂ ಮಣ್ಣು ತುಂಬಿ ಹೋಗಿದೆ.ಈವರೆಗೆ ಸಾವಿರಾರು ಮಂದಿಯನ್ನು ರಕ್ಷಿಸಲಾಗಿದೆ. ಸೇನಾ ಪಡೆಯು ಹೆಚ್ಚು ನೀರು ತುಂಬಿದ ಪ್ರದೇಶಗಳಿಂದ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಗಿಲರ್ಬಟ್‌ ಗೊಪಾಯ್‌ ಅವರು ತಿಳಿಸಿದರು.

ವಾಮ್ಕೊ ಚಂಡಮಾರುತವು ಉತ್ತರ ಮನಿಲಾದ ಬುಲಾಕನ್ ಮತ್ತು ಪಂಪಂಗಾ ಪ್ರಾಂತ್ಯಗಳಲ್ಲಿ ಗುರುವಾರ ಬುಧವಾರ ತಡರಾತ್ರಿ ಅಪ್ಪಳಿಸಿದೆ. ಇದರಿಂದಾಗಿ ಮನೆಗಳು, ವಿದ್ಯುತ್‌ ಕಂಬಗಳು, ಮರಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಹೇಳಿದರು.

ಈವರೆಗೆ ಕರಾವಳಿ ಮತ್ತು ತಗ್ಗು ಪ್ರದೇಶದಿಂದ 3,50,000 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಮನಿಲಾದಲ್ಲಿ 41,000 ಸೇರಿದಂತೆ 100,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಫಿಲಿಪ್ಪೀನ್ಸ್‌ ರಾಷ್ಟ್ರೀಯ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು