ದುಶಾನ್ಬೆ: ಪೂರ್ವ ತಜಕಿಸ್ತಾನದಲ್ಲಿ ಗುರುವಾರ ನಸುಕಿನ ವೇಳೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವಿಜ್ಞಾನ ಸರ್ವೇಕ್ಷಣ ಇಲಾಖೆ (ಯುಎಸ್‌ಜಿಎಸ್) ತಿಳಿಸಿದೆ.
ಬೆಳಗ್ಗೆ 5:37ರಲ್ಲಿ ಭೂಕಂಪನವಾಗಿದೆ. ಅಫ್ಗಾನಿಸ್ತಾನ ಮತ್ತು ಚೀನಾದ ಗಡಿ ಪ್ರದೇಶವಾದ ಗೊರ್ನೊ-ಬದಖಾನ್ ಎಂಬಲ್ಲಿ ಭೂಕಂಪದ ಕೇಂದ್ರಬಿಂದುವನ್ನು ಗುರುತಿಸಲಾಗಿದೆ. ಸುಮಾರು 20.5 ಕಿಲೋಮೀಟರ್ (12.7 ಮೈಲುಗಳು) ಆಳದಲ್ಲಿ ಕಂಪನ ಉಂಟಾಗಿದೆ.
ಅತ್ಯಂತ ಕಡಿಮೆ ಪ್ರಮಾಣದ ಜನ ಭೂಕಂಪದ ಪರಿಣಾಮಕ್ಕೆ ಒಳಗಾಗಿರಬಹುದು ಎಂದು ಯುಎಸ್‌ಜಿಎಸ್ ಅಂದಾಜಿಸಿದೆ.
ಮೊದಲ ಭೂಕಂಪದ ಸುಮಾರು 20 ನಿಮಿಷಗಳ ನಂತರ 5.0-ತೀವ್ರತೆಯ ಮತ್ತೊಂದು ಕಂಪನವೂ ಉಂಟಾಗಿದೆ.
ಪಾಮಿರ್ ಪರ್ವತಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ವಿರಳ ಜನಸಂಖ್ಯೆಯಿದೆ.
ಎರಡು ವಾರಗಳ ಹಿಂದೆ ಸಂಭವಿಸಿದ 7.8 ತೀವ್ರತೆಯ ಭೂಕಂಪದಿಂದಾಗಿ ಟರ್ಕಿ ಮತ್ತು ಸಿರಿಯಾದಲ್ಲಿ 45,000ಕ್ಕಿಂತಲೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.