ಮಂಗಳವಾರ, ಜೂನ್ 28, 2022
21 °C

ಫಿಲಿಪ್ಪೀನ್ಸ್‌: ಹಡಗಿನಲ್ಲಿ ಅಗ್ನಿ ಅವಘಡ– 7 ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಮನಿಲಾ (ಎಪಿ): ಫಿಲಿಪ್ಲೀನ್ಸ್‌ನ ರಿಯಲ್‌ ಬಂದರಿನ ಸಮೀಪ ಸೋಮವಾರ ಎಂ.ವಿ. ಮಿರ್‌ಕ್ರಾಫ್ಟ್ 2 ಹಡಗಿನ ಎಂಜಿನ್‌ ಕೊಠಡಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ 7 ಜನ ಮೃತಪಟ್ಟಿದ್ದು, 24 ಮಂದಿ ಅಸ್ವಸ್ಥರಾಗಿದ್ದಾರೆ.

ಪೊಲಿಲೊ ದ್ವೀಪದಿಂದ ಕ್ವಿಜಾನ್ ಪ್ರಾಂತ್ಯದ ಪಟ್ಟಣಕ್ಕೆ ತೆರಳುತ್ತಿದ್ದ ಹಡಗಿನಲ್ಲಿ 130ಕ್ಕೂ ಹೆಚ್ಚು ಜನರಿದ್ದರು. ಬೆಂಕಿ ಕಾಣಿಸುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದವರನ್ನು ಬೇರೆ ಹಡಗುಗಳ ಸಹಾಯದಿಂದ ದಡ ಸೇರಿಸಲಾಗಿದೆ ಎಂದು ರಿಯಲ್‌ ಟೌನ್‌ ಆಡಳಿತಾಧಿಕಾರಿ ಫಿಲೋಮಿನಾ ಪೋರ್ಟೇಲ್ಸ್ ಮಾಹಿತಿ ನೀಡಿದ್ದಾರೆ.

ಫಿಲಿಪ್ಪೀನ್ಸ್‌ನಲ್ಲಿ ಹಡಗು ದುರಂತಗಳು ಸಾಮಾನ್ಯವೆನಿಸಿಬಿಟ್ಟಿವೆ. ಮೇಲಿಂದ ಮೇಲೆ ಎದುರಾಗುತ್ತಿರುವ ಬಿರುಗಾಳಿ, ದೋಣಿ ಮತ್ತು ಹಡಗುಗಳ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದು, ಮಿತಿಮೀರಿದ ಸಂಖ್ಯೆಯಲ್ಲಿ ಜನರನ್ನು ಕರೆದೊಯ್ಯುವುದು ಹಾಗೂ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸದೆ ಇರುವುದರಿಂದ ಇಂತಹ ದುರಂತಗಳು ಸಂಭವಿಸುತ್ತಿವೆ. 1987ರ ಡಿಸೆಂಬರ್‌ನಲ್ಲಿ ಡೋನಾ ಪಾಝ್‌ ಎಂಬ ಹೆಸರಿನ ಹಡಗೊಂದು ಇಂಧನ ಟ್ಯಾಂಕರ್‌ ಹಡಗಿಗೆ ಡಿಕ್ಕಿ ಹೊಡೆದುದರಿಂದ 4,300 ಮಂದಿ ಮೃತಪಟ್ಟಿದ್ದರು. ಯುದ್ಧ ಹೊರತಾಗಿ ಶಾಂತಿಕಾಲದಲ್ಲಿ ಸಮುದ್ರದಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ದುರಂತ ಎಂಬ ಕುಖ್ಯಾತಿಗೆ ಈ ಅಪಘಾತ ಪಾತ್ರವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.