ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್ 19ರೊಳಗೆ ಶೇ 90ರಷ್ಟು ವಯಸ್ಕರಿಗೆ ಕೋವಿಡ್‌ ಲಸಿಕೆ: ಜೋ ಬೈಡನ್

Last Updated 30 ಮಾರ್ಚ್ 2021, 7:22 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಏಪ್ರಿಲ್ 19ರೊಳಗೆ ಅಮೆರಿಕದ ಶೇ 90ರಷ್ಟು ಅರ್ಹ ವಯಸ್ಕರು ‘ಕೋವಿಡ್‌ 19‘ ಲಸಿಕೆ ಪಡೆಯಲಿದ್ದು, ಉಳಿದ ಶೇ 10ರಷ್ಟು ಮಂದಿ ಮೇ 1ರೊಳಗೆ ಲಸಿಕೆ ಪಡೆಯಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಕಟಿಸಿದರು.

‘ಅಮೆರಿಕದಲ್ಲಿರುವ ಎಲ್ಲ ಅರ್ಹ ವಯಸ್ಕರಲ್ಲಿ ಶೇ 90 ಮಂದಿ ಏಪ್ರಿಲ್ 19 ರೊಳಗೆ ಲಸಿಕೆ ಪಡೆಯಲಿದ್ದಾರೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಇನ್ನು ಮೂರು ವಾರಗಳಲ್ಲಿ ಇಷ್ಟೂ ಜನರು ಲಸಿಕೆ ಪಡೆದುಕೊಳ್ಳುತ್ತಾರೆ. ಅಷ್ಟು ಮಂದಿಗೆ ಪೂರೈಸುವಷ್ಟು ಲಸಿಕೆ ನಮ್ಮಲ್ಲಿ ದಾಸ್ತಾನಿದೆ‘ ಎಂದು ಬೈಡನ್ ಸೋಮವಾರ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅಮೆರಿಕದಲ್ಲಿ ಪ್ರತಿದಿನ 60 ಸಾವಿರದಷ್ಟು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಈ ಸಾಂಕ್ರಾಮಿಕವನ್ನು ನಿಯಂತ್ರಿಸಲು ಬೈಡನ್‌ ಆಡಳಿತ ಹೆಚ್ಚಿನ ಗಮನ ಹರಿಸಿದೆ ಎಂದು ಹೇಳಲಾಗುತ್ತಿದೆ.

60 ದಿನಗಳಲ್ಲಿ ದೇಶದ 10 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಮುಂದಿನ 40 ದಿನಗಳಲ್ಲಿ ಇನ್ನೂ 10 ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯೊಂದಿಗೆ ಕಾರ್ಯಾಚರಣೆ ನಡೆದಿದೆ. ಇದೇ ಭರವಸೆಯೊಂದಿಗೆ ಅಧ್ಯಕ್ಷರು ಈ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT