ಭಾನುವಾರ, ಜುಲೈ 25, 2021
22 °C

ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ ಸಾಧನೆ ಬಗ್ಗೆ ಭಾರತೀಯ ಅಮೆರಿಕನ್ನರಿಂದ ಪುಸ್ತಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್‌ ಅವರ ಐತಿಹಾಸಿಕ ಆಯ್ಕೆ ಮತ್ತು ಅಮೆರಿಕದಲ್ಲಿ ಭಾರತೀಯ ಅಮೆರಿಕನ್‌ ಸಮುದಾಯದ ಉದಯದ ಬಗ್ಗೆ ಪುಸ್ತಕವೊಂದನ್ನು ಬರೆಯಲು ಪ್ರಮುಖ ಭಾರತ ಸಂಜಾತ ವಿದ್ವಾಂಸರು, ರಾಜತಾಂತ್ರಿಕರು, ಉದ್ಯಮಿಗಳು ಒಗ್ಗೂಡಿದ್ದಾರೆ.

‘ಕಮಲಾ ಹ್ಯಾರಿಸ್‌ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾದದ್ದು ಐತಿಹಾಸಿಕ ಘಳಿಗೆ. ಅವರ  ಹೋರಾಟ, ಕಠಿಣ ಪರಿಶ್ರಮವನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಕಮಲಾ ಹ್ಯಾರಿಸ್‌ ಅವರ ಕಥೆಯು ಮೊದಲ ಮತ್ತು ಎರಡನೇ ಪೀಳಿಗೆಯ ಭಾರತೀಯ ಅಮೆರಿಕನ್ನರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಲು ಸ್ಪೂರ್ತಿ ನೀಡಲಿದೆ’ ಎಂದು ಭಾರತೀಯ ಅಮೆರಿಕನ್‌ ಉದ್ಯಮಿ ಎಂ.ಆರ್‌ ರಂಗಸ್ವಾಮಿ ಅವರು ಹೇಳಿದರು.

ರಂಗಸ್ವಾಮಿ ಅವರು ‘ಕಮಲಾ ಹ್ಯಾರಿಸ್‌ ಆ್ಯಂಡ್‌ ರೈಸ್‌ ಆಫ್‌ ಇಂಡಿಯನ್‌ ಅಮೆರಿಕನ್ಸ್‌’ ಪುಸ್ತಕದ ಲೇಖಕರಲ್ಲಿ ಒಬ್ಬರು. ‘ಅಮೆರಿಕದಲ್ಲಿ ಭಾರತೀಯರ ಉಗಮ, ಏಳಿಗೆಯೂ ಸ್ಪೂರ್ತಿದಾಯಕವಾಗಿದೆ’ ಎಂದು ಅವರು ಹೇಳಿದರು. ರಂಗಸ್ವಾಮಿ ಅವರು ‘ಇಂಡಿಯಾಸ್ಪೋರಾದ’ ಸ್ಥಾಪಕರೂ ಆಗಿದ್ದಾರೆ.

‘ಕೆಲವೇ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಭಾರತೀಯ ಅಮೆರಿಕನ್ನರು ಈಗ ವಿವಿಧ ಕ್ಷೇತ್ರಗಳಲ್ಲಿ ಪ್ರಭಾವಿಗಳಾಗಿ ಹೊರಹೊಮ್ಮುತ್ತಿದ್ದಾರೆ. ಶಿಕ್ಷಣದಿಂದ ತಂತ್ರಜ್ಞಾನ, ವ್ಯಾಪಾರದಿಂದ ವೈದ್ಯಕೀಯ, ಸರ್ಕಾರದ ಆತಿಥ್ಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ಏಳಿಗೆ ಕಾಣುತ್ತಿದ್ದಾರೆ. ಕೇವಲ ಅಮೆರಿಕ ಮಾತ್ರವಲ್ಲದೇ ಜಾಗತಿಕವಾಗಿ ಪ್ರಸಿದ್ಧಿಗಳಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು