ಅಫ್ಗಾನಿಸ್ತಾನದಲ್ಲಿ ಅಂತರ್ಯುದ್ಧ ಸಾಧ್ಯತೆ: ಅಮೆರಿಕ ಎಚ್ಚರಿಕೆ

ವಾಷಿಂಗ್ಟನ್: ‘ಅಫ್ಗಾನಿಸ್ತಾನದಲ್ಲಿ ಅಂತರ್ಯುದ್ಧ ಸಂಭವಿಸುವ ಸಾಧ್ಯತೆ ಇದೆ’ ಎಂದು ಅಮೆರಿಕದ ರಕ್ಷಣಾ ಪಡೆಗಳ ಜಂಟಿ ಸಿಬ್ಬಂದಿ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲಿ ತಿಳಿಸಿದ್ದಾರೆ.
‘ಅಂತರ್ಯುದ್ಧದಿಂದ ಮುಂದಿನ ಒಂದೆರಡು ವರ್ಷಗಳಲ್ಲಿ ಅಲ್‌ಖೈದಾ, ಐಎಸ್ ಅಥವಾ ಇತರ ಭಯೋತ್ಪಾದನೆ ಸಂಘಟನೆಗಳು ಮತ್ತಷ್ಟು ಸಕ್ರಿಯವಾಗಲಿವೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
‘ಭವಿಷ್ಯದಲ್ಲಿ ಅಫ್ಗಾನಿಸ್ತಾನದಲ್ಲಿ ಏನು ನಡೆಯುತ್ತದೆ ಎನ್ನುವುದನ್ನು ನಿರೀಕ್ಷಿಸುವುದು ಕಷ್ಟಸಾಧ್ಯ. ಆದರೆ, ಭಯೋತ್ಪಾದನೆ ಸಂಘಟನೆಗಳಿಗೆ ಆಶ್ರಯ ತಾಣವಾಗುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದ್ದಾರೆ.
‘ಸರ್ಕಾರ ರಚನೆಯ ಬಗ್ಗೆ ತಾಲಿಬಾನ್ ಇನ್ನೂ ಘೋಷಣೆ ಮಾಡಬೇಕಾಗಿದೆ. ಆದರೆ, ಅಧಿಕಾರವನ್ನು ಪಡೆದಿರುವ ತಾಲಿಬಾನ್ ಪರಿಣಾಮಕಾರಿ ಆಡಳಿತ ನಡೆಸಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.