ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀನು ಮಹಿಳೆ, ಮನೆಗೆ ತೆರಳು: ಖ್ಯಾತ ಸುದ್ದಿ ನಿರೂಪಕಿಯ ಮೇಲೆ ತಾಲಿಬಾನ್‌ ನಿರ್ಬಂಧ

Last Updated 21 ಆಗಸ್ಟ್ 2021, 7:02 IST
ಅಕ್ಷರ ಗಾತ್ರ

ಕಾಬೂಲ್: ಅಫ್ಗಾನಿಸ್ತಾನದ ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿಯೊಂದರಲ್ಲಿ ಕಳೆದ ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ನಿರೂಪಕಿಯ ಮೇಲೆ ತಾಲಿಬಾನ್‌ ನಿರ್ಬಂಧ ಹೇರಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ಸುದ್ದಿ ನಿರೂಪಕಿ ಶಬನಮ್‌ ದವ್ರಾನ್‌ ಅವರು ಸಹಾಯಕ್ಕಾಗಿ ಅಂಗಲಾಚಿದ್ದಾರೆ.

ಶಬನಮ್‌ ಅವರು ಅಫ್ಗಾನಿಸ್ತಾನದ ಸರ್ಕಾರಿ ಸ್ವಾಮ್ಯದ 'ಆರ್‌ಟಿಎ ಪಾಷ್ತೊ' ಎಂಬ ಸುದ್ದಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

'ವ್ಯವಸ್ಥೆ ಬದಲಾದ ನಂತರವೂ ಕೆಲಸ ಮಾಡಲು ನಾನು ಕಚೇರಿಗೆ ತೆರಳಿದೆ. ನನ್ನ ಕಚೇರಿಯ ಕಾರ್ಡ್ ತೋರಿಸಿದರೂ ಒಳಹೋಗಲು ನನಗೆ ಅವಕಾಶವನ್ನೇ ನೀಡಲಿಲ್ಲ' ಎಂದು ಶಬನಮ್‌ ತಿಳಿಸಿದ್ದಾರೆ.

'ನೀನು ಮಹಿಳೆ, ಮನೆಗೆ ತೆರಳು' ಎಂಬುದಾಗಿ ತಾಲಿಬಾನ್‌ ಅಧಿಕಾರಿಗಳು ಹೇಳಿದರು ಎಂದು ಶಬನಮ್‌ ಆರೋಪಿಸಿದ್ದಾರೆ.

'ನಮ್ಮ ಜೀವಕ್ಕೆ ಅಪಾಯವಿದೆ. ನನ್ನ ಮಾತುಗಳನ್ನು ಕೇಳುತ್ತಿರುವವರು ನಮಗೆ ಸಹಾಯ ಮಾಡಿ' ಎಂದು ಸುದ್ದಿ ನಿರೂಪಕಿ ವಿಡಿಯೊದಲ್ಲಿ ಅಂಗಲಾಚಿದ್ದಾರೆ.

ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನ್‌ ಶರಿಯಾ ಕಾನೂನಿನ ಅಡಿಯಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗುತ್ತದೆ ಎಂದು ಪ್ರತಿಪಾದಿಸಿತ್ತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT