ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಅಫ್ಗನ್: ಪ್ರತಿರೋಧ ತೋರಿದ್ದ ಪಂಜ್‌ಶಿರ್ ಕಣಿವೆಯೂ ತಾಲಿಬಾನಿಗಳ ವಶಕ್ಕೆ?

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಕಾಬೂಲ್: ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ವಿರುದ್ಧ ಹೋರಾಡುತ್ತಿರುವ ಕೊನೆಯ ಪ್ರದೇಶವಾದ ಕಾಬೂಲ್‌ನ ಉತ್ತರ ಭಾಗದಲ್ಲಿರುವ ಪಂಜ್‌ಶಿರ್ ಕಣಿವೆಯನ್ನು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನ್ ಇಸ್ಲಾಮಿಕ್ ಸೇನೆಯು ಹೇಳಿದೆ.

ಆದರೆ ಈ ಹೇಳಿಕೆಯನ್ನು ಪಂಜ್‌ಶಿರ್‌ ನಾಯಕರು ನಿರಾಕರಿಸಿದ್ದಾರೆ.

ಇದನ್ನೂ ಓದಿ: 

'ಸರ್ವಶಕ್ತನಾದ ಅಲ್ಲಾಹುವಿನ ಕೃಪೆಯಿಂದ ನಾವು ಅಫ್ಗಾನಿಸ್ತಾನವನ್ನು ಸಂಪೂರ್ಣ ವಶಕ್ಕೆ ಪಡೆದಿದ್ದೇವೆ. ಪಂಜ್‌ಶಿರ್‌ನಲ್ಲಿ ಸಮಸ್ಯೆ ಸೃಷ್ಟಿಸಿದವರನ್ನು ಸೋಲಿಸಲಾಗಿದ್ದು, ಈಗ ನಮ್ಮ ನಿಯಂತ್ರಣದಲ್ಲಿದೆ' ಎಂದು ತಾಲಿಬಾನ್ ಕಮಾಂಡರ್ ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ಕಾಬೂಲ್‌ನಲ್ಲಿ ಗುಂಡನ್ನು ಹಾರಿಸುವ ಮೂಲಕ ಸಂಭ್ರಮಾಚರಣೆ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲೂ ಈ ಕುರಿತು ಉಲ್ಲೇಖಿಸಲಾಗಿದೆ.

ವರದಿಗಳನ್ನು ತಕ್ಷಣಕ್ಕೆ ದೃಢೀಕರಿಸಲು ಸಾಧ್ಯವಿಲ್ಲ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ. ತಾಲಿಬಾನಿಗಳು 1996 ಹಾಗೂ 2001ರಲ್ಲಿ ಅಫ್ಗಾನಿಸ್ತಾನವನ್ನು ಆಳಿದ ಸಂದರ್ಭದಲ್ಲೂ ಪಂಜ್‌ಶಿರ್ ಕಣಿವೆಯನ್ನು ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ.

ತಾಲಿಬಾನ್‌ಗೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ಪಂಜ್‌ಶಿರ್ ಕಣಿವೆಯ ನಾಯಕರಾದ ಮಾಜಿ ಅಧ್ಯಕ್ಷ ಅಮರುಲ್ಲಾ ಸಲೇಹ್ ವರದಿಯನ್ನು ನಿರಾಕರಿಸಿದ್ದು, ಸೋಲನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.

'ನಾವು ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ ಎಂಬುದರಲ್ಲಿ ಸಂದೇಹವಿಲ್ಲ. ನಾವು ತಾಲಿಬಾನಿಗಳ ಆಕ್ರಮಣಕ್ಕೆ ಒಳಗಾಗಿದ್ದೇವೆ' ಎಂದು ಸಲೇಹ್‌ ಹೇಳಿರುವ ವಿಡಿಯೊವನ್ನು ಬಿಬಿಸಿ ವರ್ಲ್ಡ್‌ ಪತ್ರಕರ್ತ ಟ್ವಿಟರ್‌ನಲ್ಲಿ ಹಂಚಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು