ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ ಬಳಿಕ ರಷ್ಯಾದ ಮಾಧ್ಯಮಗಳಿಗೆ ನಿರ್ಬಂಧ ಹೇರಿದ ಯೂಟ್ಯೂಬ್

Last Updated 27 ಫೆಬ್ರುವರಿ 2022, 13:29 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೊ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರೆದಿದೆ. ಆ ಹಿನ್ನೆಲೆಯಲ್ಲಿ ಫೇಸ್‌ಬುಕ್ ಬಳಿಕ ಯೂಟ್ಯೂಬ್ ಸಹ ರಷ್ಯಾದ ಮಾಧ್ಯಮಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.

ತನ್ನ ವೇದಿಕೆಯಲ್ಲಿ ಯಾವುದೇ ರೀತಿಯ ಜಾಹೀರಾತು ಪ್ರಕಟಣೆ ಮತ್ತು ಕಂಟೆಂಟ್‌ಗೆ ಮಾನಿಟೈಸ್ ಮಾಡಲು ಆಗದಂತೆ ತಡೆಯೊಡ್ಡಿರುವುದಾಗಿ ಯೂಟ್ಯೂಬ್ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕದ ಸುದ್ದಿ ಮಾಧ್ಯಮ ‘ಸಿಎನ್‌ಎನ್‌’ ಪ್ರಕಾರ, 'ಸರ್ಕಾರದ ಮನವಿಗೆ ಅನುಗುಣವಾಗಿ ರಷ್ಯಾದ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಉಕ್ರೇನ್‌ನಲ್ಲಿ ರಷ್ಯಾದ ಆರ್‌ಟಿ ಸೇರಿದಂತೆ ಎಲ್ಲ ಮಾಧ್ಯಮಗಳ ಕಾರ್ಯಾಚರಣೆಗೆ ತಡೆಯೊಡ್ಡಲಾಗಿದೆ' ಎಂದು ಕಂಪನಿ ತಿಳಿಸಿದೆ.

ಇದಕ್ಕೂ ಮುನ್ನ ಶನಿವಾರ, ಉಕ್ರೇನ್ ಡಿಜಿಟಲ್ ಸಚಿವ ಮೈಖೈಲೊ ಪೆಡೊರೊವ್ ಅವರು, 'ಪ್ರಚಾರಕ ರಷ್ಯಾದ ಚಾನೆಲ್‌ಗಳನ್ನು', ಅದರಲ್ಲೂ ಮುಖ್ಯವಾಗಿ ರಷ್ಯಾ 24, ಟಿಎಎಸ್‌ಎಸ್‌ ಮತ್ತು ಆರ್‌ಐಎ ನೊವೊಸ್ತಿ‌ಗಳನ್ನು ಸ್ಥಗಿತಗೊಳಿಸಬೇಕು' ಎಂದು ಟ್ವೀಟ್ ಮೂಲಕ ಯೂಟ್ಯೂಬ್‌ಗೆ ಮನವಿ ಮಾಡಿದ್ದರು.

ಶುಕ್ರವಾರವಷ್ಟೇ ಫೇಸ್‌ಬುಕ್ ಕೂಡ ತನ್ನ ವೇದಿಕೆಯಲ್ಲಿ ರಷ್ಯಾ ಸರ್ಕಾರಿ ಪ್ರಾಯೋಜಿತ ಮಾಧ್ಯಮಗಳ ಜಾಹೀರಾತುಗಳನ್ನು ಪ್ರಕಟಿಸುವುದು ಮತ್ತು ಮಾನಿಟೈಸ್ ಮಾಡುವುದಕ್ಕೆ ನಿರ್ಬಂಧ ವಿಧಿಸಿತ್ತು. ಇದೀಗ ಯೂಟ್ಯೂಬ್ ಕೂಡ ಇದೇ ಕ್ರಮ ಕೈಗೊಂಡಿದೆ.

'ನಾವು ಈಗ ರಷ್ಯಾದ ಮಾಧ್ಯಮಗಳು ವಿಶ್ವದ ಯಾವುದೇ ಭಾಗದಲ್ಲಿ ನಮ್ಮ ವೇದಿಕೆಗಳ ಮೂಲಕ ಜಾಹೀರಾತುಗಳನ್ನು ಪ್ರಕಟಿಸುವುದು ಅಥವಾ ಹಣ ಗಳಿಸುವುದನ್ನು ನಿಷೇಧಿಸುತ್ತಿದ್ದೇವೆ' ಎಂದು ಫೇಸ್‌ಬುಕ್ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT