ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬುಧಾಬಿ–ಕೋಯಿಕ್ಕೋಡ್‌ ಏರ್‌ ಇಂಡಿಯಾ ವಿಮಾನದ ಎಂಜಿನ್ ವಿಫಲ: ತುರ್ತು ಲ್ಯಾಂಡ್

ವಿಮಾನದಲ್ಲಿದ್ದ 184 ಪ್ರಯಾಣಿಕರು ಸುರಕ್ಷಿತ 
Last Updated 3 ಫೆಬ್ರುವರಿ 2023, 6:00 IST
ಅಕ್ಷರ ಗಾತ್ರ

ಅಬುಧಾಬಿ: ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ಎಂಜಿನ್‌ ವಿಫಲವಾಗಿದ್ದರಿಂದ ಏರ್‌ ಇಂಡಿಯಾ ವಿಮಾನವೊಂದು ಇಲ್ಲಿನ ಏರ್‌ಪೋರ್ಟ್‌ನಲ್ಲಿ ಶುಕ್ರವಾರ ತುರ್ತು ಲ್ಯಾಂಡ್ ಆಗಿದೆ.

ಈ ವಿಮಾನವು ಅಬುಧಾಬಿಯಿಂದ ಕೋಯಿಕ್ಕೋಡ್‌ಗೆ ಹೊರಟಿತ್ತು.

ಟೇಕಾಫ್‌ ಆಗಿ 1000 ಅಡಿ ಎತ್ತರ ಹಾರಿದ ಬಳಿಕ ಈ ಘಟನೆ ನಡೆದಿದೆ. ಸುದೈವವಶಾತ್‌ ಯಾವುದೇ ಸಾವು–ನೋವು ಉಂಟಾಗಿಲ್ಲ.

ವಿಮಾನದಲ್ಲಿ ಅಗ್ನಿ ಕಾಣಿಸಿಕೊಂಡಿದ್ದರಿಂದ ತುರ್ತು ಭೂಸ್ಪರ್ಶ ಮಾಡಲಾಗಿತ್ತು ಎಂದು ‍ಪ್ರಾಥಮಿಕ ವರದಿಯಲ್ಲಿ ಹೇಳಲಾಗಿತ್ತು. ಎಂಜಿನ್ ವಿಫಲವಾಗಿದ್ದರಿಂದ ಈ ರೀತಿ ಮಾಡಬೇಕಾಯ್ತು ಎಂದು ಬಳಿಕ ಮೂಲಗಳು ಖಚಿತ ಪಡಿಸಿವೆ.

184 ಪ್ರಯಾಣಿಕರಿದ್ದ ಬೋಯಿಂಗ್‌ 737–800 ವಿಮಾನದಲ್ಲಿ ಈ ದೋಷ ಕಂಡು ಬಂದಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವಿಮಾನ ಸಂಸ್ಥೆಯ ವಕ್ತಾರ ಪ್ರತಿಕ್ರಿಯಿಸಿದ್ದಾರೆ.

ಟೇಕಾಫ್‌ ವೇಳೆ ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಹೀಗಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT