ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಮಾನಿಕ ಪ್ರದರ್ಶನ: ವಿಶ್ವಯುದ್ಧ ಕಾಲದ 2 ವಿಮಾನಗಳ ನಡುವೆ ಡಿಕ್ಕಿ, 6 ಸಾವು

Last Updated 13 ನವೆಂಬರ್ 2022, 18:16 IST
ಅಕ್ಷರ ಗಾತ್ರ

ಡಲ್ಲಾಸ್‌ (ಅಮೆರಿಕ): ಡಲ್ಲಾಸ್‌ನಲ್ಲಿ ಶನಿವಾರ ನಡೆದ ವೈಮಾನಿಕ ಪ್ರದರ್ಶನದ ವೇಳೆ ಎರಡು ಸೇನೆಯ ಎರಡು ವಿಂಟೇಜ್‌ ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.

ಬೋಯಿಂಗ್ ಬಿ–17 ಮತ್ತು ಬೆಲ್‌ ಪಿ–63 ಕಿಂಗ್ ಕೋಬ್ರಾ ಯುದ್ಧ ವಿಮಾನಗಳ ನಡುವೆ ಅಪಘಾತ ಸಂಭ ವಿಸಿದೆ ಎಂದು ಫೆಡಲರ್ ಏವಿಯೇ ಷನ್‌ನ ಆಡಳಿತ ಹೇಳಿಕೆ ನೀಡಿದೆ. ಆದರೆ, ಮೃತರ ವಿವರಗಳನ್ನು ತಿಳಿಸಿಲ್ಲ.

ಆಗಸದಲ್ಲಿ ವಿಮಾನಗಳು ಡಿಕ್ಕಿ ಯಾಗಿ ಪತನಗೊಂಡಿದ್ದು, ಆ ಸ್ಥಳದಲ್ಲಿ ದಟ್ಟ ಜ್ವಾಲೆ ಮತ್ತು ಕಪ್ಪು ಹೊಗೆ ಆವರಿಸಿತ್ತು. ವಿಮಾನ ಅಪಘಾತ ಕುರಿತ ವಿಡಿಯೊಗಳು ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿವೆ.

ದುರಂತದಲ್ಲಿ ವಿಮಾನಗಳ ಭಗ್ನಾವಶೇಷಗಳು ಮಾತ್ರ ಉಳಿದಿದ್ದು, ಪ್ರದರ್ಶನ ವೀಕ್ಷಿಸಲು ಸೇರಿದ್ದ ಜನರಿಗೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ದಲ್ಲಾಸ್‌ನ ಅಗ್ನಿಶಾಮಕ ದಳ ತಿಳಿಸಿದೆ.

2011ರಲ್ಲಿ ರೆನೊದಲ್ಲಿ ಸಂಭವಿಸಿದ್ದ ವಿಂಟೇಜ್‌ ಯುದ್ಧ ವಿಮಾನಗಳ ಅಪಘಾತದಲ್ಲಿ 11 ಜನರು ಮೃತಪಟ್ಟಿದ್ದರು. ಆ ನಂತರ ವೈಮಾನಿಕ ಪ್ರದರ್ಶನದಲ್ಲಿ ಹಳೆ ಯುದ್ಧವಿಮಾನಗಳ ಬಳಕೆ ವೇಳೆ ಸುರಕ್ಷತೆ ಕುರಿತು ಹೆಚ್ಚಿನ ಆತಂಕ ವ್ಯಕ್ತವಾಗಿದೆ.

ವಿಶ್ವಯುದ್ಧ–2ರ ಅವಧಿಯ ಯುದ್ಧವಿಮಾನಗಳ ಅಪಘಾತ ಸಂಬಂಧ 1982ರಿಂದ ಈವರೆಗೆ 21 ಅಪಘಾತಗಳು ಸಂಭವಿಸಿದ್ದು, ಸುಮಾರು 23 ಜನರು ಮೃತಪಟ್ಟಿದ್ದಾರೆ.

ಏರ್ ಶೋ ಏರ್ಪಡಿಸಿದ್ದ ಹಾಂಕ್‌ ಕೋಟ್ಸ್‌ ಕಂಪನಿಯ ಪ್ರಕಾರ, ‘ಬಿ–17 ವಿಮಾನದಲ್ಲಿ 4–5 ಕುಳಿತುಕೊಳ್ಳಬಹುದು. ಪಿ–63 ಕಿಂಗ್‌ ಕೋಬ್ರಾ ಯುದ್ಧ ವಿಮಾನದಲ್ಲಿ ಒಬ್ಬ ಪೈಲಟ್‌ ಕುಳಿತುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT