ಬುಧವಾರ, ಆಗಸ್ಟ್ 10, 2022
24 °C

ಫೈಜರ್ ಲಸಿಕೆ ಹಾಕಿಸಿಕೊಂಡ ಅಲಸ್ಕಾ ಆರೋಗ್ಯ ಕಾರ್ಯಕರ್ತನಿಗೆ ತೀವ್ರ ಅಲರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಲಸ್ಕಾ: ಅಮೆರಿಕದ ಅಲಸ್ಕಾದಲ್ಲಿ ಫೈಜರ್ ಲಸಿಕೆ ಹಾಕಿಸಿಕೊಂಡ ಬಳಿಕ ಆರೋಗ್ಯ ಕಾರ್ಯಕರ್ತ ತೀವ್ರ ಅಲರ್ಜಿಯಿಂದ ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆರೋಗ್ಯ ಸಿಬ್ಬಂದಿಯ ನಿಕಟವರ್ತಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತ ಸುಧಾರಿಸಿಕೊಂಡಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಪ್ರಕರಣ ಕುರಿತಂತೆ ಮತ್ತಷ್ಟು ಮಾಹಿತಿ ಕಲೆ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಲಸಿಕೆ ಅಲರ್ಜಿ ಸಮಸ್ಯೆ ಎದುರಿಸಿದ ಕಾರ್ಯಕರ್ತನಿಗೆ ಅಲರ್ಜಿ ಇತಿಹಾಸ ಇತ್ತೇ ಎಂಬ ಬಗ್ಗೆ ಸದ್ಯ ಮಾಹಿತಿ ತಿಳಿದುಬಂದಿಲ್ಲ. ಮುಂಬರುವ ವಾರಗಳಲ್ಲಿ ಲಕ್ಷಾಂತರ ಅಮೆರಿಕನ್ನರಿಗೆ ಲಸಿಕೆ ನೀಡುತ್ತಿರುವುದರಿಂದ ಘಟನೆಯ ವಿಶಾಲ ಮಹತ್ವವನ್ನು ನಿರ್ಣಯಿಸುವುದು ಕಷ್ಟಕರವಾಗಿದೆ. ಕಳೆದ ವಾರ ಬ್ರಿಟನ್ನಿನಲ್ಲಿ ಫೈಜರ್-ಬಯೋ ಅಂಡ್ ಟೆಕ್ ಲಸಿಕೆ ಪಡೆದ ನಂತರ ಇಬ್ಬರು ಆರೋಗ್ಯ ಕಾರ್ಯಕರ್ತರಲ್ಲಿ ಕಂಡುಬಂದ ಅನಾಫಿಲ್ಯಾಕ್ಟಿಕ್ ಪ್ರತಿಕ್ರಿಯೆಗಳಿಗೆ ಈ ಆರೋಗ್ಯ ಕಾರ್ಯಕರ್ತನ ಅಲರ್ಜಿ ಹೋಲುತ್ತದೆ ಎಂದು ನಂಬಲಾಗಿದೆ. ಆದರೆ, ಆ ಇಬ್ಬರೂ ಚೇತರಿಸಿಕೊಂಡಿದ್ದಾರೆ.

ಫೈಜರ್ ಲಸಿಕಾ ಕಂಪನಿಯ ಪ್ರತಿನಿಧಿಯು ಘಟನೆ ಕುರಿತಂತೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೆ, ಬ್ರಿಟನ್ನಿನಲ್ಲಿ ಲಸಿಕೆಯಿಂಅ ಅಲರ್ಜಿ ಅನುಭವಿಸಿದ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ತೀವ್ರ ಅಲರ್ಜಿ ಇತಿಹಾಸವಿತ್ತು ಎಂದು ಫೈಜರ್ ಲಸಿಕೆ ಕಂಪನಿಯ ಅಧಿಕಾರಿಗಳು ಹೇಳುತ್ತಾರೆ.

ಈ ಮಧ್ಯೆ, ಅಮೆರಿಕ ಫೆಡರಲ್ ಔಷಧಿ ನಿಯಂತ್ರಕವು 16 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಅನುಮತಿ ನೀಡಿದೆ. ಜೊತೆಗೆ, ಅಲರ್ಜಿ ಇತಿಹಾಸವಿರುವ ಯಾರಿಗೂ ಲಸಿಕೆ ನೀಡದಂತೆ ಆರೋಗ್ಯ ಸಿಬ್ಬಂದಿಗೆ ಸೂಚಿಸಲಾಗಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು