ಶುಕ್ರವಾರ, ಆಗಸ್ಟ್ 6, 2021
27 °C

ಸೈಬೀರಿಯಾದ ವಿಮಾನ ಪತ್ತೆ: ಎಲ್ಲ 18 ಮಂದಿ ಸುರಕ್ಷಿತ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮಾಸ್ಕೊ: ರಷ್ಯಾದ ಸೈಬೀರಿಯಾ ಪ್ರಾಂತ್ಯದ ಟಾಮ್‌ಸ್ಕ್‌ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಾಪತ್ತೆಯಾಗಿದ್ದ 18 ಜನರಿದ್ದ ವಿಮಾನ ಪತ್ತೆಯಾಗಿದ್ದು, ಎಲ್ಲರೂ ಜೀವಂತವಾಗಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

‘ವಿಮಾನದಲ್ಲಿದ್ದ ಎಲ್ಲರೂ ಜೀವಂತವಾಗಿದ್ದಾರೆ’ ಎಂದು ರಷ್ಯಾದ ವಾಯುಯಾನ ಸಂಸ್ಥೆ ತಿಳಿಸಿದೆ. ಈ ಕುರಿತು ಸುದ್ದಿಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ವಿಮಾನವು ಟಾಮ್‌ಸ್ಕ್‌ನಲ್ಲಿ ಕಠಿಣ ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ 15 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿಯನ್ನು ಪ್ರಾದೇಶಿಕ ರಾಜಧಾನಿಗೆ ರವಾನಿಸಲಾಗುತ್ತಿದೆ ಎಂದು ವಾಯುಯಾನ ಸಂಸ್ಥೆ ಮಾಹಿತಿ ನೀಡಿದೆ.

‘ಸೈಬೀರಿಯನ್ ಲೈಟ್ ಏವಿಯೇಷನ್ (ಸಿಲಾ)’ನ ನಿರ್ವಹಣೆಯಲ್ಲಿದ್ದ ಈ ವಿಮಾನವು ಕೆಡ್ರೋವಿ ನಗರದಿಂದ ಪ್ರಾದೇಶಿಕ ರಾಜಧಾನಿ ಟಾಮ್‌ಸ್ಕ್‌ಗೆ ಹಾರಾಟ ನಡೆಸುತ್ತಿದ್ದ ವೇಳೆ ಸಂಪರ್ಕ ಕಳೆದುಕೊಂಡಿತ್ತು ಎಂದು ಟಾಮ್‌ಸ್ಕ್‌ನ ರಾಜ್ಯಪಾಲ ಸೆರ್ಗೆಯ್ ಜ್ವಾಚ್‌ಕಿನ್ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು