ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಕೋವಿಡ್‌ ದಾಖಲೆ ಏರಿಕೆ; ಸಿಡಿದೆದ್ದ ಜನ

ಪ್ರತಿಭಟನೆ ಹತ್ತಿಕ್ಕಲು ಹಲವರ ಬಂಧನ; ಲಾಕ್‌ಡೌನ್‌ ವಿರೋಧಿಸಿ ಷಿ ಜಿನ್‌ಪಿಂಗ್‌, ಸಿಪಿಸಿ ವಿರುದ್ಧ ಜನರ ಕಿಡಿ
Last Updated 27 ನವೆಂಬರ್ 2022, 20:14 IST
ಅಕ್ಷರ ಗಾತ್ರ

ಬೀಜಿಂಗ್‌/ತೈಪೆ: ಚೀನಾದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಸತತ ನಾಲ್ಕನೇ ದಿನವೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿವೆ. ಭಾನುವಾರ ಒಂದೇ ದಿನ ಸೋಂಕಿನ 40,000 ಹೊಸ ಪ್ರಕರಣಗಳು ದಾಖಲಾಗಿವೆ.ಸೋಂಕು ಶೂನ್ಯಕ್ಕಿಳಿಸಲು ಅಧ್ಯಕ್ಷ ಷಿ ಜಿನ್‌ಪಿಂಗ್‌ ನೇತೃತ್ವದ ಸರ್ಕಾರಹೇರಿ‌ರುವ ಕಠಿಣ ಲಾಕ್‌ಡೌನ್‌ ವಿರೋಧಿಸಿ ದೇಶದಾದ್ಯಂತ ವ್ಯಾಪಕ ಜನಾಕ್ರೋಶವೂ ಭುಗಿಲೆದ್ದಿದೆ.

ದೇಶದಾದ್ಯಂತ ಸಾಮೂಹಿಕವಾಗಿ ಕೋವಿಡ್‌ ಪರೀಕ್ಷೆ ನಡೆಸುತ್ತಿದ್ದು, ಇದರಿಂದ ಶನಿವಾರ 35,858 ಲಕ್ಷಣರಹಿತ ಪ್ರಕರಣಗಳೂ ಸೇರಿ 39,501 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ಈ ನಡುವೆ,ಆಡಳಿತಾರೂಢ ಚೀನಾ ಕಮ್ಯುನಿಸ್ಟ್‌ ಪಕ್ಷ (ಸಿಪಿಸಿ) ಮತ್ತು ಷಿ ಜಿನ್‌ಪಿಂಗ್‌ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಭಾರಿ ಸಂಖ್ಯೆಯಲ್ಲಿ ಜನರು ಕಾಂಪೌಂಡ್‌ ಒಳಗೆ ಮತ್ತು ರಸ್ತೆಗಳಲ್ಲಿ ಪ್ರತಿಭಟಿಸಿದರು. ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೂ ಪ್ರತಿಭಟನೆಗೆ ಕೈಜೋಡಿಸಿದರು.ಹಲವು ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆಯದೃಶ್ಯಗಳ ವಿಡಿಯೊಗಳು ಟ್ವಿಟರ್‌ ಮತ್ತು ಚೀನಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದವು.

10 ಜನರ ಸಾವು: ರಾಜಧಾನಿ ಬೀಜಿಂಗ್,ಶಾಂಘೈ ಸೇರಿ ಹಲವು ನಗರಗಳಲ್ಲಿ ಕೋವಿಡ್‌ ಸೋಂಕು ತಡೆಗಟ್ಟಲು ಹಲವು ಅಪಾರ್ಟ್‌ಮೆಂಟ್‌ ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗಿದೆ.ಕಠಿಣ ಲಾಕ್‌ಡೌನ್‌ ವೇಳೆ, ಷಿನ್‌ಜಿಯಾಂಗ್ ಪ್ರಾಂತೀಯ ರಾಜಧಾನಿ ಉರುಮ್ಕಿ ನಗರದಲ್ಲಿ ಅ‍ಪಾರ್ಟ್‌ಮೆಂಟ್‌ವೊಂದರಲ್ಲಿ ಗುರುವಾರ ಬೆಂಕಿ ಕಾಣಿಸಿ, 10 ಜನರು ‌ಮೃತಪಟ್ಟರು. ಇದರಿಂದ ಹಾನ್ ಚೀನಿ ಪ್ರಜೆಗಳು ಮತ್ತು ಉಯಿಗರ್‌ ಮುಸ್ಲಿಮರು ವಾರಾಂತ್ಯ ನಡೆಸಿದ ಬೃಹತ್‌ ಪ್ರತಿಭಟನೆಗೂ ಉರುಮ್ಕಿ ಸಾಕ್ಷಿಯಾಯಿತು. ಪರಿಣಾಮ ಸರ್ಕಾರ, ಅಲ್ಲಿಲಾಕ್‌ಡೌನ್‌ ಜಾರಿಯಿಂದ ಹಿಂದೆ ಸರಿಯಿತು.

ಪ್ರತಿಭಟನೆಗಳ ವಿಡಿಯೊಗಳು ಆನ್‌ಲೈನ್ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ, ‘ನಗರದಲ್ಲಿ ಕೋವಿಡ್‌ ನಿರ್ಬಂಧ ಹಂತಹಂತವಾಗಿ ತೆಗೆಯಲಾಗುವುದು’ ಎಂದು ಉರುಮ್ಕಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಹಾಂಗ್ ಕಾಂಗ್‌ನ ‘ಸೌತ್‌ ಚೀನಾ ಮಾರ್ನಿಂಗ್ ಪೋಸ್ಟ್’ ಭಾನುವಾರ ವರದಿ ಮಾಡಿದೆ.ಬೀಜಿಂಗ್‌ನಲ್ಲಿ ಪ್ರತಿಭಟನೆ ತೀವ್ರಗೊಂಡ ಕಾರಣಕ್ಕೆ, ಅಧಿಕಾರಿಗಳು ಲೌಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಿದರು.

‘ಕೆಲವು ಸ್ಥಳೀಯ ಸರ್ಕಾರಗಳುವ್ಯಾಪಕವಾಗಿ ಲಾಕ್‌ಡೌನ್‌ ಹೇರುವುದು ಅಥವಾ ಸೋಂಕು ಪ್ರಸರಣದ ವಿರುದ್ಧ ಸಡಿಲ ಧೋರಣೆ ಅನುಸರಿಸುತ್ತಿರುವುದು ಕಂಡುಬಂದಿದೆ. ಸೋಂಕು ತಡೆಗೆ ಈ ಎರಡೂ ಪ್ರವೃತ್ತಿಗಳು ಸರಿಯಲ್ಲ’ ಎಂದು ಚೀನಿ ಸರ್ಕಾರಿ ಮಾಧ್ಯಮ ‘ಚೀನಾ ಡೈಲಿ’ ವರದಿ ಮಾಡಿದೆ.

ಪ್ರತಿಭಟನೆ ಹತ್ತಿಕ್ಕಲು ಪೆಪ್ಪರ್‌ ಸ್ಪ್ರೇ

ಚೀನಾದಲ್ಲಿ ನಡೆಯುತ್ತಿರುವ ಕೋವಿಡ್ ಲಾಕ್‌ಡೌನ್ ವಿರೋಧಿ ಪ್ರತಿಭಟನೆಗಳು ಭಾನುವಾರ ರಾಜಕೀಯ ಸ್ವರೂಪ ಪಡೆದವು.ಶಾಂಘೈನ ವುಲುಮುಖಿ ರಸ್ತೆಯಲ್ಲಿಶನಿವಾರ ರಾತ್ರಿಯಿಂದಲೇ ಭಾರಿ ಭದ್ರತೆ ಇದ್ದರೂ ಭಾನುವಾರ ಬೆಳಿಗ್ಗೆ ಸಾವಿರಾರು ಜನರು ಪ್ರತಿಭಟನೆಗೆ ಇಳಿದರು. ಉರುಮ್ಕಿ ರಸ್ತೆಯಲ್ಲಿ ಮಧ್ಯರಾತ್ರಿ ಸೇರಿದ್ದ ಸುಮಾರು 300 ಪ್ರತಿಭಟನಕಾರರ ಮೇಲೆ ಪೊಲೀಸರು ಪೆಪ್ಪರ್ ಸ್ಪ್ರೇ ಬಳಸಿದರು.

‌‘ಷಿ ಜಿನ್‌‍ಪಿಂಗ್‌ ಕೆಳಗಿಳಿಯಲಿ, ಸಿಪಿಸಿಅಧಿಕಾರದಿಂದತೊಲಗಲಿ’, ‘ನಮಗೆ ಪಿಸಿಆರ್‌ ಪರೀಕ್ಷೆ ಬೇಡ, ನಮಗೆ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಬೇಕು’ ಎಂಬ ಘೋಷಣೆಗಳು ಮೊಳಗಿದವು.

ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿರುವ ಷಿ ಜಿನ್‌ಪಿಂಗ್‌ ಅವರಿಗೆ ದೇಶದಲ್ಲಿ ಉಲ್ಬಣಿಸುತ್ತಿರುವ ಕೋವಿಡ್‌, ಲಾಕ್‌ಡೌನ್‌ ವಿರೋಧಿ ಪ್ರತಿಭಟನೆ ಹಾಗೂ ಆರ್ಥಿಕ ಹಿಂಜರಿತ ನಿಭಾಯಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT