ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌: ಹತ್ಯೆ ನಿಲ್ಲಿಸಲು ಆಸಿಯಾನ್‌ ನಾಯಕರ ಒತ್ತಾಯ

Last Updated 24 ಏಪ್ರಿಲ್ 2021, 13:53 IST
ಅಕ್ಷರ ಗಾತ್ರ

ಜಕಾರ್ತ: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ನಡೆಸುತ್ತಿರುವ ಹತ್ಯೆಯನ್ನು ನಿಲ್ಲಿಸಬೇಕು, ಬಂಧಿತ ರಾಜಕೀಯ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ಆಸಿಯಾನ್‌) ನಾಯಕರು ಒತ್ತಾಯಿಸಿದ್ದಾರೆ.

ಇಂಡೊನೇಷ್ಯಾ ರಾಜಧಾನಿ ಜಕಾರ್ತದಲ್ಲಿ ನಡೆದ ತುರ್ತು ಶೃಂಗಸಭೆಯಲ್ಲಿ ಮಾತನಾಡಿದ ನಾಯಕರು, ಮ್ಯಾನ್ಮಾರ್‌ನಲ್ಲಿನ ಬೆಳವಣಿಗೆಗಳು ಹಾಗೂ ಸದ್ಯದ ಪರಿಸ್ಥಿತಿಯನ್ನು ಒಪ್ಪಲಾಗದು ಎಂದು ಮಿಲಿಟರಿ ಅಧಿಕಾರಿಗಳು ಹಾಗೂ ದಂಗೆಗೆ ಬೆಂಬಲಿಸುವ ಮುಖಂಡರಿಗೆ ಹೇಳಿದರು.

ಮ್ಯಾನ್ಮಾರ್‌ ಮಿಲಿಟರಿಯ ಹಿರಿಯ ಜನರಲ್‌ ಮಿನ್‌ ಆಂಗ್‌ ಲೈಂಗ್‌ ಅವರನ್ನು ಉದ್ದೇಶಿಸಿ ಮಾತನಾಡಿದ ಇಂಡೊನೇಷ್ಯಾ ಅಧ್ಯಕ್ಷ ಜೋಕೊ ವಿಡೊಡೊ, ‘ದೇಶದ ಇತರ ಮುಖಂಡರೊಂದಿಗೆ ಕೂಡಲೇ ಮಾತುಕತೆ ಆರಂಭಿಸಿ ಈ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಕೊನೆಗಾಣಿಸಬೇಕು’ ಎಂದರು.

‘ಹಿಂಸಾಚಾರವನ್ನು ನಿಲ್ಲಿಸಬೇಕು. ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ, ಸ್ಥಿರತೆ ಹಾಗೂ ಶಾಂತಿ ಮರುಸ್ಥಾಪನೆಯಾಗಬೇಕು. ಮ್ಯಾನ್ಮಾರ್‌ ಜನತೆಯ ಹಿತಾಸಕ್ತಿಗಳೇ ಮುಖ್ಯವಾಗಬೇಕು’ ಎಂದು ವಿಡೊಡೊ ಹೇಳಿದರು.

ಆಸಿಯಾನ್‌ ನಾಯಕರ ಕಟು ಮಾತುಗಳಿಗೆ ಜನರಲ್‌ ಮಿನ್‌ ಆಂಗ್‌ ಲೈಂಗ್‌ ಅವರ ಪ್ರತಿಕ್ರಿಯೆ ಏನಿತ್ತು ಎಂಬುದರ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ.

ಮಿಲಿಟರಿ ದಂಗೆ ಎದ್ದು, ಆಂಗ್‌ ಸಾನ್‌ ಸೂಕಿ ಸೇರಿದಂತೆ ದೇಶದ ಪ್ರಮುಖ ರಾಜಕಿಯ ನಾಯಕನ್ನು ಬಂಧಿಸಿದ ನಂತರ ಜನರಲ್‌ ಮಿನ್‌ ಆಂಗ್‌ ಲೈಂಗ್‌ ಅವರು ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿರುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT