ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್: ಚಳಿಗಾಲದ ಚಂಡಮಾರುತದಿಂದ ಮೂವರು ಸಾವು

Last Updated 28 ನವೆಂಬರ್ 2021, 12:49 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಇಂಗ್ಲೆಂಡ್‌ನಲ್ಲಿ ಮೊದಲ ವರ್ಷದ ಚಳಿಗಾಲದ ಚಂಡಮಾರುತದಲ್ಲಿ ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ್ದಾರೆ. ಮಾರುತವು ಗಂಟೆಗೆ 100 ಕಿ.ಮೀ.ವೇಗದಲ್ಲಿ ಬೀಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಇಂಗ್ಲೆಂಡ್‌ನ ಹವಾಮಾನ ಇಲಾಖೆಯ ಚಂಡಮಾರುತವನ್ನು ಅರ್ವೆನ್ ಎಂದು ಹೆಸರಿಸಿದ್ದು, ದೇಶದ ಉತ್ತರ ಭಾಗಗಳು, ಸ್ಕಾಟ್‌ಲ್ಯಾಂಡ್‌ ಮತ್ತು ಉತ್ತರ ಐರ್ಲೆಂಡ್‌ ಭಾಗದಲ್ಲಿ ನ್ನು ಶುಕ್ರವಾರ ಮತ್ತು ಶನಿವಾರ ತೀವ್ರವಾಗಿ ಅಪ್ಪಳಿಸಿದೆ ಎಂದು ಹೇಳಿದೆ.ಈ ಕಡೆಗಳಲ್ಲಿ ಮರಗಳು ಬಿದ್ದು ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದು ರಸ್ತೆ ತಡೆ, ರೈಲು ವಿಳಂಬ, ವಿದ್ಯುತ್ ಕಡಿತ ಮತ್ತು ಭಾರಿ ಗಾತ್ರದ ಅಲೆಗಳು ಏಳುವಂತೆಯೂ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT