ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನಲ್ಲಿ ಹಿಜಾಬ್ ವಿರುದ್ಧದ ಪ್ರತಿಭಟನೆ: 2 ತಿಂಗಳಲ್ಲಿ 326 ನಾಗರಿಕರ ಹತ್ಯೆ

Last Updated 13 ನವೆಂಬರ್ 2022, 9:52 IST
ಅಕ್ಷರ ಗಾತ್ರ

ಒಸ್ಲೊ (ನಾರ್ವೆ): ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸಿದ ಕನಿಷ್ಠ 326 ನಾಗರಿಕರನ್ನು ಅಲ್ಲಿನ ಸೇನೆ ಹತ್ಯೆ ಮಾಡಿದೆ ಎಂದು ವರದಿ ತಿಳಿಸಿದೆ.

ನಾರ್ವೆ ಮೂಲದ ಇರಾನಿಯನ್ ಮಾನವ ಹಕ್ಕುಗಳ ಹೋರಾಟದ ಎನ್‌ಜಿಒ (IHRNGO) ಈ ಆರೋಪ ಮಾಡಿದೆ.

ಕಳೆದ ಎರಡು ತಿಂಗಳು ಹಿಂದೆ ಹಿಜಾಬ್ ವಿರುದ್ಧ ಆರಂಭವಾಗಿದ್ದ ಪ್ರತಿಭಟನೆಗಳು ದೇಶದ ತುಂಬ ಪಸರಿಸಿತ್ತು. ಅನೇಕ ಮಹಿಳೆಯರು ಇದರಲ್ಲಿ ಸ್ವಯಂ ಪ್ರೇರಿತವಾಗಿ ಪಾಲ್ಗೊಂಡಿದ್ದರು. ಈ ವೇಳೆ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ 326 ಜನರನ್ನು ಹತ್ಯೆ ಮಾಡಲಾಗಿದೆ ಎಂದು ಎನ್‌ಜಿಒಸಮರ್ಥಿಸಿಕೊಂಡಿದೆ.

ಹಿಜಾಬ್‌ನ್ನು ಸರಿಯಾಗಿ ಧರಿಸದಿದ್ದಕ್ಕೆ ಇರಾನ್ ಪೊಲೀಸರು ಮಹ್ಸಾ ಅಮಿನಿ ಎನ್ನುವ ಯುವತಿಯನ್ನು ಹತ್ಯೆ ಮಾಡಿದ್ದರು. ಇದರ ವಿರುದ್ಧ ಇರಾನ್ ತುಂಬ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿವೆ. ಇರಾನ್‌ಗೆ ಈ ಘಟನೆ ದೊಡ್ಡ ಬಿಕ್ಕಟ್ಟನ್ನು ತಂದೊಡ್ಡಿದೆ.

ಸೆಲಿಬ್ರಿಟಿಗಳು, ಕ್ರೀಡಾಪಟುಗಳು, ನಟ–ನಟಿಯರು ಈ ಘಟನೆ ಖಂಡಿಸಿ ಇರಾನ್ ಸರ್ಕಾರದ ವಿರುದ್ಧ ಪ್ರತಿಭಟನೆಗಳಿಗೆ ಇಳಿದಿದ್ದಾರೆ. 22 ಪ್ರಾಂತಗಳಲ್ಲಿ ಹತ್ಯೆಗಳುನಡೆದಿದ್ದು ಸಿಸ್ತಾನ್, ಬಲೂಚಿಸ್ತಾನ್, ಟೆಹರಾನ್, ಮಜಂದ್ರಾನ್, ಕುರ್ದಿಸ್ತಾನ್, ಗಿಲಾನ್‌ನಲ್ಲಿ ಹೆಚ್ಚು ಹತ್ಯೆಗಳು ನಡೆದಿವೆ ಎಂದು ವರದಿ ತಿಳಿಸಿದೆ.

ಇರಾನ್‌ನಲ್ಲಿ ನಡೆಯುತ್ತಿರುವ ನಾಗರಿಕ ಹತ್ಯೆಗಳನ್ನು ಖಂಡಿಸುವಂತೆ IHRNGO ಅಂತರರಾಷ್ಟ್ರೀಯ ಸಮುದಾಯಗಳಿಗೆ ಮನವಿ ಮಾಡಿದೆ.

1979ರ ಇಸ್ಲಾಮಿಕ್‌ ಕ್ರಾಂತಿಯ ಬಳಿಕ, ಇರಾನ್ ಮಹಿಳೆಯರ ಬದುಕು ಅಸಹನೀಯವಾಗಿದೆ. ಧರ್ಮದ ಅಮಲೇರಿಸಿಕೊಂಡಿರುವ ಇರಾನ್‌ ಸರ್ಕಾರವು ಮಹಿಳೆಯನ್ನು ಧಾರ್ಮಿಕ ಚೌಕಟ್ಟಿನ ಒಳಗೆಯೇ ಕಟ್ಟಿಹಾಕುವ ಯತ್ನವನ್ನು ಮಾಡುತ್ತಲೇ ಬಂದಿದೆ. ಇದರ ವಿರುದ್ಧ ಮಹಿಳೆಯರು ಪ್ರತಿಭಟಿಸುತ್ತಲೇ ಬಂದಿದ್ದಾರೆ. ಈ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕುತ್ತಲೇ ಬಂದಿದೆ. ಹೀಗಾಗಿಯೇ ಅಮೀನಿ ಹತ್ಯೆಯು ಮಹಿಳೆಯರ ಸಹನೆಯ ಕಟ್ಟೆಯನ್ನು ಒಡೆಯಿತು ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT