ಸೋಮವಾರ, ನವೆಂಬರ್ 30, 2020
21 °C
ಮತ ಎಣಿಕೆ ಪ್ರಕ್ರಿಯೆ ಮುಂದುವರಿಕೆ

ಮ್ಯಾನ್ಮಾರ್‌ ಚುನಾವಣೆ; ಗೆಲುವು ಘೋಷಿಸಿಕೊಂಡ ಆಡಳಿತಾರೂಢ ‘ಸೂಕಿ‘ ಪಕ್ಷ

ಎಪಿ Updated:

ಅಕ್ಷರ ಗಾತ್ರ : | |

Prajavani

ಯಾಂಗೂನ್: ಮ್ಯಾನ್ಮಾರ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ನ್ಯಾಷನಲ್ ಲೀಗ್‌ ಫಾರ್ ಡೆಮಾಕ್ರಸಿ ಪಕ್ಷ (ಎನ್‌ಎಲ್‌ಡಿ) ಭರ್ಜರಿ ಗೆಲುವು ಸಾಧಿಸಿದ್ದು, ಅಧಿಕಾರ ಉಳಿಸಿಕೊಂಡಿರುವುದಾಗಿ ಹೇಳಿಕೊಡಿದೆ.

ಚುನಾವಣಾ ಆಯೋಗ ಭಾನುವಾರ ಚುನಾವಣೆಯಲ್ಲಿ ವಿಜೇತರಾದವರ ಕೆಲವು ಹೆಸರನ್ನಷ್ಟೇ ಹೇಳಿತ್ತು. ಸೂಕಿ ನೇತೃತ್ವದ ಎನ್ಎಲ್‌ಡಿ ಪಕ್ಷ, ಸಂಸತ್ತಿನಲ್ಲಿ ಬಹುಮತಕ್ಕೆ ಅಗತ್ಯವಾದಷ್ಟು ಸ್ಥಾನಗಳನ್ನು ಗೆದ್ದಿದ್ದು, ತಾವು ಅಧಿಕಾರವನ್ನು ಉಳಿಸಿಕೊಳ್ಳುವುದಾಗಿ ಹೇಳಿದೆ.

ಪೂರ್ಣ ಫಲಿತಾಂಶ ಪ್ರಕಟವಾಗಲು ಒಂದು ವಾರ ತೆಗೆದುಕೊಳ್ಳಬಹುದು ಎಂದು ಕೇಂದ್ರ ಚುನಾವಣಾ ಆಯೋಗ ಈ ಹಿಂದೆ ಹೇಳಿತ್ತು. ಆದರೆ, ಭಾನುವಾರ ರಾತ್ರಿ 8 ರ ಹೊತ್ತಿಗೆ, ಸಂಸತ್ತಿನ ಕೇವಲ 642 ಸ್ಥಾನಗಳಲ್ಲಿ, ಎಲ್ಲಾ ಒಂಬತ್ತು ಎನ್‌ಎಲ್‌ಡಿ ಅಭ್ಯರ್ಥಿಗಳ ವಿಜೇತರನ್ನು ಅದು ಘೋಷಿಸಿತ್ತು.

ಎನ್‌ಎಲ್‌ಡಿ ವಕ್ತಾರ ಮೊನಿವಾ ಆಂಗ್ ಶಿನ್, 642 ಸ್ಥಾನಗಳ ಪೈಕಿ ತಮ್ಮ ಪಕ್ಷ  322 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ ಎಂದು ದೃಢಪಡಿಸಿದ್ದಾರೆ. ಇನ್ನೂ ಕೆಲವು ಸ್ಥಾನಗಳ ಫಲಿತಾಂಶ ಬಾಕಿ ಉಳಿದಿದ್ದು, ಆ ಸ್ಥಾನಗಳು ನಮ್ಮ ಪಕ್ಷಕ್ಕೆ ಸಿಗಲಿವೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎನ್‌ಎಲ್‌ಡಿ ಪಕ್ಷದ ನಾಯಕಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆಂಗ್ ಸಾನ್ ಸೂಕಿ ಅಪಾರ ಜನಪ್ರಿಯತೆ ಪಡೆದಿರುವುದರಿಂದ ಆ ಪಕ್ಷದ ಗೆಲುವನ್ನು ನಿರೀಕ್ಷಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು