ಭಾನುವಾರ, ಜೂನ್ 13, 2021
23 °C

ಮೌಂಟ್‌ ಎವರೆಸ್ಟ್‌ ಏರಿದ ಬಹ್ರೇನ್ ರಾಯಲ್ ಗಾರ್ಡ್ ತಂಡ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ಬಹ್ರೇನ್‌ನ ರಾಜಕುಮಾರ ಮೊಹಮ್ಮದ್ ಹಮದ್ ಮೊಹಮ್ಮದ್ ಅಲ್ ಖಲೀಫಾ ನೇತೃತ್ವದ 16 ಸದಸ್ಯರ ಬಹ್ರೇನ್ ರಾಯಲ್ ಗಾರ್ಡ್ ತಂಡವು ಮಂಗಳವಾರ ಜಗತ್ತಿನ ಅತ್ಯುನ್ನತ ಶಿಖರ ಮೌಂಟ್‌ ಎವರೆಸ್ಟ್‌ನ್ನು ಆರೋಹಣ ಮಾಡಿದೆ. ಈ ಮೂಲಕ ಮೌಂಟ್‌ ಎವರೆಸ್ಟ್‌ನ ಪರಿಷ್ಕೃತ ಎತ್ತರವನ್ನು ಏರಿದ ಮೊದಲ ಅಂತರರಾಷ್ಟ್ರೀಯ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಬಹ್ರೇನ್ ರಾಯಲ್ ಗಾರ್ಡ್ ತಂಡವು ಮಂಗಳವಾರ ಮುಂಜಾನೆ ಸುಮಾರು 5.30 ರಿಂದ 6.45ಕ್ಕೆ ಮೌಂಟ್‌ ಎವೆರೆಸ್ಟ್‌ ಶಿಖರವನ್ನು ತಲುಪಿದೆ’ ಎಂದು ಚಾರಣವನ್ನು ಆಯೋಜಿಸಿದ ಸೆವೆನ್‌ ಸಮಿತ್‌ ಟ್ರೆಕ್‌ನ ಅಧ್ಯಕ್ಷ ಮಿಂಗ್ಮಾ ಶೆರ್ಪಾ ತಿಳಿಸಿದರು. ಈ ಬಗ್ಗೆ ಹಿಮಾಲಯನ್‌ ಟೈಮ್ಸ್‌ ವರದಿ ಮಾಡಿದೆ.

ಈ ತಂಡವು ಮೌಂಟ್‌ ಎವರೆಸ್ಟ್‌ ಚಾರಣಕ್ಕಾಗಿ ಮಾರ್ಚ್‌ 15 ರಂದು ಕಠ್ಮಂಡುಗೆ ಬಂದಿತ್ತು. ‘ಮೌಂಟ್‌ ಎವರೆಸ್ಟ್‌ನ ಪರಿಷ್ಕೃತ ಎತ್ತರವು 8,848.86 ಮೀಟರ್‌’ ಎಂದು ಕಳೆದ ವರ್ಷ ನೇಪಾಳ ಮತ್ತು ಚೀನಾಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದವು.

1954ರಲ್ಲಿ ಭಾರತವು ಎವರೆಸ್ಟ್‌ನ ಎತ್ತರವನ್ನು ಅಳೆದಿತ್ತು. ಆಗ ಅದರ ಎತ್ತರ 8,848 ಮೀಟರ್ ಎಂದು ಅಂದಾಜಿಸಲಾಗಿತ್ತು. ಕಳೆದ ವರ್ಷದ ಅಳತೆಯ ಬಳಿಕ ಜಗತ್ತಿನ ಈ ಅತ್ಯುನ್ನತ ಶಿಖರದ ಎತ್ತರ 86 ಸೆಂಟೀಮೀಟರ್ ಹೆಚ್ಚಾಗಿರುವುದು ದಾಖಲಾಗಿತ್ತು. 2015ರಲ್ಲಿ ಸಂಭವಿಸಿದ ಭೂಕಂಪದ ಬಳಿಕ ಹಲವಾರು ಭೌಗೋಳಿಕ ಬದಲಾವಣೆಗಳು ಆಗಿರುವ ಕಾರಣ ಹೊಸದಾಗಿ ಶಿಖರದ ಎತ್ತರ ಅಳೆಯುವ ನಿರ್ಧಾರಕ್ಕೆ ನೇಪಾಳ ಸರ್ಕಾರ ಬಂದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು