ಸೋಮವಾರ, ಜುಲೈ 26, 2021
21 °C

ಇಸ್ರೇಲ್‌: 12 ವರ್ಷಗಳ ಬಳಿಕ ಪ್ರಧಾನಿ ನಿವಾಸದಿಂದ ನಿರ್ಗಮಿಸಿದ ನೇತನ್ಯಾಹು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ತೆಲ್‌ ಅವಿವ್ (ಇಸ್ರೇಲ್‌): ಇಸ್ರೇಲ್‌ ಮಾಜಿ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಹಾಗೂ ಅವರ ಕುಟುಂಬ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸದಿಂದ ನಿರ್ಗಮಿಸಿದೆ ಎಂದು ವರದಿಯಾಗಿದೆ.

ಈ ವಾರ ಪ್ರಧಾನಿ ನಿವಾಸದೆದುರು ಟ್ರಕ್‌ಗಳು ಸಂಚರಿಸುತ್ತಿರುವುದು ಕಂಡುಬಂದಿದೆ ಎಂದು ಟೈಮ್ಸ್‌ ಆಫ್‌ ಇಸ್ರೇಲ್‌ ವರದಿ ಮಾಡಿದೆ. ಶುಕ್ರವಾರ ಹಲವು ವಾಹನಗಳು ನಿರ್ಗಮಿಸುತ್ತಿರುವುದು ಕಂಡು ಬಂದಿದೆ. ಅವು ವಿರೋಧ ಪಕ್ಷದ ನಾಯಕ ನೇತನ್ಯಾಹು ಅವರಿಗೆ ಸೇರಿದವುಗಳೇ ಆಗಿವೆ ಎಂದು ಕೆಲವು ಮಾಧ್ಯಮಗಳು ಪ್ರಕಟಿಸಿವೆ.

ಅಂದಹಾಗೆ ನೇತನ್ಯಾಹು ಅವರು ಶನಿವಾರ ತಡರಾತ್ರಿಯಲ್ಲಿ ಜೆರುಸಲೇಂನಿಂದ ತೆರಳಿದ್ದಾರೆ ಎನ್ನಲಾಗಿದ್ದು, ಈ ವಿಚಾರವನ್ನು ಅಧಿಕಾರಿಗಳು ಖಚಿತಪಡಿಸಿಲ್ಲ.

ಇದನ್ನೂ ಓದಿ | ಇಸ್ರೇಲ್‌: ನೇತನ್ಯಾಹು ಪದಚ್ಯುತಿ– ನಫ್ತಾಲಿ ನೂತನ ಪ್ರಧಾನಿ

ಬಲಪಂಥೀಯ ನಾಯಕ ನಫ್ತಾಲಿ ಬೆನ್ನೆಟ್‌ ಅವರು ಜೂನ್‌ 13ರಂದು ಇಸ್ರೇಲ್‌ ಪ್ರಧಾನಿಯಾಗಿ ಆಯ್ಕೆಯಾಗುವುದರೊಂದಿಗೆ, ನೇತನ್ಯಾಹು ಅವರ ಸತತ 12 ವರ್ಷಗಳ ಆಡಳಿತ ಕೊನೆಗೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು