ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದರನ ಜೊತೆ ಬಾಹ್ಯಾಕಾಶಕ್ಕೆ ಹಾರಲಿರುವ ಜೆಫ್ ಬೆಜೋಸ್

Last Updated 7 ಜೂನ್ 2021, 13:54 IST
ಅಕ್ಷರ ಗಾತ್ರ

ವಾಷಿಂಗ್ಟನ್: ಮುಂದಿನ ತಿಂಗಳು ಬಾಹ್ಯಾಕಾಶಕ್ಕೆ ಹಾರುವುದಾಗಿ ಜೆಫ್ ಬೆಜೋಸ್ ಘೋಷಿಸಿದ್ದಾರೆ.

ಬ್ಲೂ ಆರಿಜಿನ್‌ನ ಬಿಲಿಯನೇರ್ ಸಂಸ್ಥಾಪಕ ಜೆಫ್ ಬೆಜೋಸ್ ತನ್ನ ಕಂಪನಿಯ ಮೊದಲ ಸಬ್ ಆರ್ಬಿಟಲ್ ಸೈಟ್ ಸೀಯಿಂಗ್ ಪ್ರಯಾಣದಲ್ಲಿ ತಾವು ಮತ್ತು ತಮ್ಮ ಸಹೋದರ ಬಾಹ್ಯಾಕಾಶ ನೌಕೆ ನ್ಯೂ ಶೆಪರ್ಡ್‌ನ ಇಬ್ಬರು ಪ್ರಯಾಣಿಕರಾಗಿರುತ್ತೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಅವರು, ನಾನು, ನನ್ನ ಸಹೋದರ ಮತ್ತು ಸದ್ಯ ನಡೆಯುತ್ತಿರುವ ಹರಾಜಿನ ವಿಜೇತರ ಜೊತೆ ಜುಲೈ 20 ರಂದು ಪ್ರಾರಂಭವಾಗಲಿರುವ ಬ್ಲೂ ಒರಿಜಿನ್ ನ ಹೊಸ ಶೆಪರ್ಡ್ ಬಾಹ್ಯಾಕಾಶ ನೌಕೆಯ ಮೊದಲ ಪ್ರಯಾಣದಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವುದಾಗಿ ಹೇಳಿದ್ದಾರೆ.

ಜುಲೈ 20 ಅಪೊಲೊ 11 ನೌಕೆಯು ಚಂದ್ರನ ಮೇಲೆಲ್ಯಾಂಡ್ ಆದ ವಾರ್ಷಿಕೋತ್ಸವ. ಇದೇ ದಿನ ಟೆಕ್ಸಾಸ್‌ನಿಂದ ಬಾಹ್ಯಾಕಾಶದ ಪ್ರಯಾಣ ಆರಂಭವಾಗಲಿದೆ.

ಬ್ಲೂ ಆರಿಜಿನ್ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಗಮನಹರಿಸಲು ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಫೆಬ್ರವರಿಯಲ್ಲಿ ಜೆಫ್ ಬೆಜೋಸ್ ಘೋಷಿಸಿದ್ದರು.

‘ಭೂಮಿಯನ್ನು ಬಾಹ್ಯಾಕಾಶದಿಂದ ನೋಡಿದರೆ ಅದು ನಿಮ್ಮನ್ನು ಬದಲಾಯಿಸುತ್ತದೆ. ಈ ಗ್ರಹದೊಂದಿಗಿನ ನಿಮ್ಮ ಸಂಬಂಧವನ್ನು ಬದಲಾಯಿಸುತ್ತದೆ ’ ಎಂದು ಬೆಜೋಸ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

"ನಾನು ಈ ವಾಹನದಲ್ಲಿ ಬಾಹ್ಯಾಕಾಶಕ್ಕೆ ಹೋಗಲು ಬಯಸುತ್ತೇನೆ. ಏಕೆಂದರೆ, ನನ್ನ ಜೀವನದುದ್ದಕ್ಕೂ ನಾನು ಇದಕ್ಕಾಗಿ ಹಾತೊರೆಯುತ್ತಿದ್ದೆ. ಇದು ಒಂದು ಸಾಹಸ. ಇದು ನನಗೆ ದೊಡ್ಡ ವಿಷಯ.’ ಎಂದು ಬರೆದುಕೊಂಡಿದ್ದಾರೆ.

ನ್ಯೂ ಶೆಪರ್ಡ್‌ ವಾಹನದಲ್ಲಿ ಆಸನಕ್ಕಾಗಿ ನಡೆಯುತ್ತಿರುವ ಹರಾಜು ಶನಿವಾರ ಕೊನೆಗೊಳ್ಳುತ್ತದೆ. ಇದೀಗ, ಬಿಡ್ಡಿಂಗ್ ಮೊತ್ತ 2.8 ಮಿಲಿಯನ್ ಡಾಲರ್‌ಗಳಷ್ಟಿದೆ, 143 ದೇಶಗಳಿಂದ ಸುಮಾರು 6,000 ಮಂದಿ ಇದರಲ್ಲಿ ಭಾಗವಹಿಸಿದ್ದಾರೆ.

ಹರಾಜಿನಿಂದ ಬಂದ ಹಣವನ್ನು ಬ್ಲೂ ಆರಿಜಿನ್‌ನ ಫೌಂಡೇಶನ್ ಕ್ಲಬ್ ಫಾರ್ ದಿ ಫ್ಯೂಚರ್‌ಗೆ ದೇಣಿಗೆಯಾಗಿ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT