ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌–1ಬಿ ವೀಸಾ ಹೊಂದಿದವರ ಪತ್ನಿಗೆ ಉದ್ಯೋಗ ಪರವಾನಗಿ: ಅಮೆರಿಕ ಸಮ್ಮತಿ

Last Updated 12 ನವೆಂಬರ್ 2021, 6:16 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಎಚ್‌–1ಬಿ ವೀಸಾ ಹೊಂದಿರುವವರ ಪತ್ನಿಗೆ, ಉದ್ಯೋಗ ಪರವಾನಗಿ ಒದಗಿಸುವ ಸ್ವಯಂಚಾಲಿತ ವ್ಯವಸ್ಥೆಯನ್ನು ಜಾರಿಗೊಳಿಸಲು ಅಮೆರಿಕದ ಸರ್ಕಾರ ಸಮ್ಮತಿಸಿದೆ.

ಇದೊಂದು ವಲಸಿಗರ ಸ್ನೇಹಿ ಕ್ರಮವಾಗಿದ್ದು, ಈ ಸೌಲಭ್ಯದಿಂದ ಅಸಂಖ್ಯ ಸಂಖ್ಯೆಯಲ್ಲಿರುವ ಮಹಿಳೆಯರಿಗೆ, ಅದರಲ್ಲಿಯೂ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ(ಐಟಿ) ಕ್ಷೇತ್ರದ ವೃತ್ತಿಪರರಾದ ಭಾರತೀಯ –ಅಮೆರಿಕನ್ ಮಹಿಳೆಯರಿಗೆಅನುಕೂಲವಾಗಲಿದೆ.

ಎಚ್‌–1ಬಿ ವೀಸಾ ಉಳ್ಳವರ ಕುಟುಂಬದ ಸದಸ್ಯರಿಗೆ (ಪತ್ನಿ ಮತ್ತು 21 ವರ್ಷದೊಳಗಿನ ಮಕ್ಕಳು) ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್‌ಸಿಐಎಸ್‌) ಸಂಸ್ಥೆಯು ಎಚ್‌–4 ವೀಸಾ ನೀಡಲಿದೆ. ಇದನ್ನು ಸಾಮಾನ್ಯವಾಗಿ ಅಮೆರಿಕದಲ್ಲಿ ಉದ್ಯೋಗಾಧಾರಿತ ಕಾನೂನು ಬದ್ಧ ಕಾಯಂ ನಿವಾಸಿ ಸ್ಥಾನಮಾನ ಪಡೆಯುವ ಪ್ರಕ್ರಿಯೆ ಆರಂಭಿಸಿದವರಿಗೆ ನೀಡಲಾಗುತ್ತದೆ.

ಎಚ್‌–1ಬಿ ಎಂಬುದು ವಲಸಿಗಯೇತರ ವೀಸಾ ಆಗಿದ್ದು, ಇದು ಅಮೆರಿಕದ ಕಂಪನಿಗಳು ವಿದೇಶಿ ನೌಕರರನ್ನು ಮುಖ್ಯವಾಗಿ ಪ್ರಾಯೋಗಿಕ ಮತ್ತು ತಾಂತ್ರಿಕ ಪರಿಣತ ಕ್ಷೇತ್ರಗಳಲ್ಲಿ ನೇಮಿಸಿಕೊಳ್ಳಲು ಅನುವು ಮಾಡಿಕೊಡಲಿವೆ. ಭಾರತ ಮತ್ತು ಚೀನಾದಿಂದ ಪ್ರತಿ ವರ್ಷ ಹತ್ತು ಸಾವಿರಾರು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲುತಂತ್ರಜ್ಞಾನ ಆಧರಿತ ಕಂಪನಿಗಳು ಇದನ್ನೇ ಅವಲಂಬಿಸಿವೆ.

ಎಚ್‌–1ಬಿ ವೀಸಾ ಹೊಂದಿದ್ದವರ ವಲಸಿಗ ಪತ್ನಿಯರ ಪರವಾಗಿ ಅಮೆರಿಕನ್ ಇಮಿಗ್ರೇಷನ್ ಲಾಯರ್ಸ್ ಅಸೋಸಿಯೇಷನ್ (ಎಐಎಲ್ಎ) ವಕಾಲತ್ತು ಹೂಡಿತ್ತು. ಈ ಹಿನ್ನೆಲೆಯಲ್ಲಿ ದೇಶೀಯ ಭದ್ರತಾ ಇಲಾಖೆಯು ಒಪ್ಪಂದವೊಂದಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT