ಶನಿವಾರ, ಸೆಪ್ಟೆಂಬರ್ 18, 2021
30 °C

ಸರ್‌ ನಿಮ್ಮ ಗಲ್ಲದ ಮೇಲೆ ಏನೋ ಇದೆ:  ಬೈಡನ್‌ಗೆ ಬಂದ ಚೀಟಿ ಸೆರೆಹಿಡಿದ ಛಾಯಾಗ್ರಾಹಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌:  ‘ಸರ್‌, ನಿಮ್ಮ ಗಲ್ಲದ ಮೇಲೆ ಏನೋ ಇದೆ,’

ಇದು,  ಶುಕ್ರವಾರ ವರ್ಚುವಲ್‌ ಸಭೆಯೊಂದರಲ್ಲಿ ಭಾಗವಹಿಸಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಸಹಾಯಕರೊಬ್ಬರು ಕಳುಹಿಸಿದ ಚೀಟಿಯಲ್ಲಿದ್ದ ಸಂದೇಶ. 

ಸುದ್ದಿ ಸಂಸ್ಥೆ ‘ಅಸೋಸಿಯೇಟೆಡ್‌ ಪ್ರೆಸ್‌’ನ ಫೋಟೊ ಜರ್ನಲಿಸ್ಟ್‌ ಚೀಟಿಯಲ್ಲಿದ್ದ ಮಾಹಿತಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಚಿತ್ರ ಜಗತ್ತಿನಾದ್ಯಂತ ವೈರಲ್‌ ಆಗಿದೆ. 

ಚೀಟಿಯನ್ನು ತೆಗೆದುಕೊಳ್ಳುವಾಗ ಅದನ್ನು ಬೈಡನ್‌ ಹಿಂದೆ ತಿರುಗಿಸಿದ್ದರು. ಈ ವೇಳೆ ಅದನ್ನು ಸೆರೆಹಿಡಿಯಲಾಗಿದೆ. 

ವರ್ಚುವಲ್‌ ಸಭೆಯಲ್ಲಿ ಭಾಗವಹಿಸಿದ್ದ ಬೈಡನ್‌ ಅವರ ಗಲ್ಲದ ಮೇಲೆ ಮೊಟ್ಟೆಯ ಹಳದಿ ಭಾಗವನ್ನು ಹೋಲುವ ಪದಾರ್ಥವೊಂದು ಕಂಡು ಬಂದಿತ್ತು. ಚೀಟಿ ಓದುತ್ತಲೇ ಬೈಡನ್‌ ಅವರು ತಮ್ಮ ಮುಖ ಒರೆಸಿಕೊಳ್ಳುವ ವಿಡಿಯೊ ಕೂಡ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು