ಬುಧವಾರ, ಆಗಸ್ಟ್ 17, 2022
28 °C

‘ಶೀಘ್ರದಲ್ಲೇ ಕೋವಿಡ್‌ ಲಸಿಕೆ ಪಡೆಯಲಿರುವ ಬೈಡನ್, ಪೆನ್ಸ್

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಮತ್ತು ಹಾಲಿ ಉಪಾಧ್ಯಕ್ಷ ಮೈಕ್ ಪೆನ್ಸೆ ಅವರು ಶೀಘ್ರದಲ್ಲೇ ಸಾರ್ವಜನಿಕವಾಗಿ ‘ಕೋವಿಡ್‌ 19‘ ವಿರುದ್ಧದ ಲಸಿಕೆಯನ್ನು ತೆಗೆದುಕೊಳ್ಳಲಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಆಡಳಿತ ಹಸ್ತಾಂತರ ಪ್ರಕ್ರಿಯೆ ತಂಡದ ಅಧಿಕಾರಿಗಳಿಗಿರುವ ಮಾಹಿತಿ ಪ್ರಕಾರ, ‘ಬೈಡನ್ ಅವರು ಮುಂದಿನ ವಾರದಲ್ಲಿ ಸಾರ್ವಜನಿಕವಾಗಿ ಲಸಿಕೆಗೆ ತೆಗೆದುಕೊಳ್ಳಲಿದ್ದಾರೆ. ಇದೇ ರೀತಿ ಶ್ವೇತಭವನದ ಮಾಹಿತಿ ಪ್ರಕಾರ, ಉಪಾಧ್ಯಕ್ಷ ಮೈಕ್ ಪೆನ್ಸೆ ಮತ್ತು ಪತ್ನಿ ಕರೇನ್ ಅವರು ಶುಕ್ರವಾರ ಸಾರ್ವಜನಿಕವಾಗಿ ಲಸಿಕೆಗೆ ತಗೆದುಕೊಳ್ಳಲಿದ್ದಾರೆ.

‘ನಾನು ಆರೋಗ್ಯ ಕಾರ್ಯಕರ್ತರು ಮತ್ತು ದುರ್ಬಲ ಜನರಿಗೆ ಮೊದಲು ಲಸಿಕೆ ನೀಡಬೇಕೆಂದು ನಿರ್ಧರಿಸಿದ್ದೇರೆ. ಆದರೆ ದೇಶದ ಸಾಂಕ್ರಾಮಿಕ ರೋಗ ತಜ್ಞರಲ್ಲಿ ಒಬ್ಬರಾದ ಡಾ. ಅಂಥೋಣಿ ಫೌನ್ಸಿ ಅವರು ಆದಷ್ಟು ಬೇಗ ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ನನಗೆ ಸಲಹೆ ನೀಡಿದರು’ ಎಂದು ಜೋ ಬೈಡನ್‌ ಅವರು ಮಂಗಳವಾರ ಹೇಳಿದರು.

‘ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯುವುದಕ್ಕಿಂತ ಮುನ್ನ ನಾನು ಲಸಿಕೆ ತೆಗೆದುಕೊಳ್ಳಲು ಬಯಸಿರಲಿಲ್ಲ. ಆದರೆ ಅಮೆರಿಕದ ನಾಗರಿಕರಲ್ಲಿ ಲಸಿಕೆ ಬಗ್ಗೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ನಾನು ಲಸಿಕೆಯನ್ನು ತೆಗೆದುಕೊಳ್ಳಲು ಸಿದ್ಧನಾದೆ’ ಎಂದು ಅವರು ತಿಳಿಸಿದರು.

ಹೆಚ್ಚುವರಿ ಲಸಿಕೆ ಖರೀದಿ ಕುರಿತು ಚರ್ಚೆ

ವಾಷಿಂಗ್ಟನ್‌(ಎಪಿ): ‘ಕೋವಿಡ್‌ 19‘ ವಿರುದ್ದ ಫೈಜರ್ ಕಂಪನಿ ಅಭಿವೃದ್ದಿಪಡಿಸಿರುವ ಲಸಿಕೆಯ ಪರಿಣಾಮದ ಕುರಿತು ಸ್ಪಷ್ಟತೆ ಲಭ್ಯವಾಗದಿದ್ದರೂ, ಹೆಚ್ಚುವರಿ ಲಸಿಕೆ ಖರೀದಿಸುವ ಕುರಿತು ಕಂಪನಿಯೊಂದಿಗೆ ಮಾತುಕತೆ ಮುಂದುವರಿಸುತ್ತಿದ್ದೇವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಅಲೆಕ್ಸಾ ಅಝರ್ ಮತ್ತು ವಿಶೇಷ ಸಲಹೆಗಾಗರ ಮಾನ್‌ಸೆಫ್ ಸ್ಲೌವಾಯ್, ‘ಫೈಜರ್ ಕಂಪನಿ ಲಸಿಕೆ ಪೂರೈಸುವ ದಿನಾಂಕವನ್ನು ಇನ್ನೂ ಖಚಿತಪಡಿಸಿಲ್ಲ. ಇದೇ ಪ್ರಮುಖ ಸಮಸ್ಯೆಯಾಗಿದೆ‘ ಎಂದು ಹೇಳಿದರು.  ಅಮೆರಿಕದ ಈ ಹೇಳಿಕೆಗಳಿಗೆ ಫೈಜರ್ ಕಂಪನಿ ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು