ವಾಷಿಂಗ್ಟನ್: ಕೊರೊನಾ ವೈರಸ್ ಪ್ರಸರಣವನ್ನು ತಡೆಯಲು ಅಮೆರಿಕದಲ್ಲಿ ಲಾಕ್ಡೌನ್ ಹೇರುವುದಿಲ್ಲ. ಬದಲಿಗೆ ದೇಶದಾದ್ಯಂತ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ತಿಳಿಸಿದರು.

ಇದನ್ನು ಓದಿ:ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

‘ಪ್ರತಿಯೊಂದು ಪ್ರದೇಶ, ಸಮುದಾಯಗಳಲ್ಲಿ ಪರಿಸ್ಥಿತಿ ವಿಭಿನ್ನವಾಗಿರಬಹುದು. ಹಾಗಾಗಿ ರಾಷ್ಟ್ರೀಯ ಲಾಕ್ಡೌನ್ ಹೇರಲಾಗುವುದಿಲ್ಲ. ದೇಶದಲ್ಲಿ ಸಂಪೂರ್ಣ ಲಾಕ್ಡೌನ್ ಮಾಡುವ ಅಗತ್ಯವಿಲ್ಲ. ಆದರೆ, ಕೆಲ ವ್ಯಾಪಾರ ವಹಿವಾಟಿಗೆ ನಿರ್ಬಂಧ ವಿಧಿಸಲಾಗುವುದು' ಎಂದರು.

ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ಕೊರೊನಾ ಹರಡುವುದನ್ನು ತಡೆಯಲು ವೈಜ್ಞಾನಿಕ ಮಾರ್ಗ ಅನುಸರಿಸಲಿದ್ದೇವೆ. ದೇಶದ ಆರ್ಥಿಕತೆಯನ್ನು ಸ್ಥಗಿತಗೊಳಿಸುವುದಿಲ್ಲ. ಬದಲಿಗೆ ಕೊರೊನಾ ವೈರಸ್ ಅನ್ನು ಲಾಕ್ಡೌನ್ ಮಾಡುತ್ತೇವೆ’ ಎಂದು ಮಾಹಿತಿ ನೀಡಿದರು.

‘ಉದಾಹರಣೆಗೆ ಪ್ರಕರಣಗಳು ಕಡಿಮೆಯಿರುವ ರಾಜ್ಯಗಳಲ್ಲಿ ಜಿಮ್ಗಳನ್ನು ತೆರೆಯಲು ಅನುಮತಿ ನೀಡಲಾಗುವುದು. ಅದರಲ್ಲೂ ಸಮಯ ಮತ್ತು ಜನರ ಸಾಮರ್ಥ್ಯದಲ್ಲಿ ನಿರ್ಬಂಧವನ್ನು ಹೇರಲಾಗುವುದು’ ಎಂದು ವಿವರಿಸಿದರು.

‘ಗವರ್ನರ್ಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ದೇಶದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ನಿರ್ಧಾರಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.

‘33 ಕೋಟಿ ಅಮೆರಿಕನ್ನರಿಗೆ ಲಸಿಕೆಯನ್ನು ತಲುಪಿಸಬೇಕಾಗಿದೆ. ಇದಕ್ಕಾಗಿ ಆಗಾಧ ಸಂಪನ್ಮೂಲ, ಜನರು ಮತ್ತು ಉತ್ಪನಗಳ ಅವಶ್ಯಕತೆ ಇದೆ. ಇದು ಕಷ್ಟಕರ ಕೆಲಸವಾಗಿದೆ. ಬಹಳ ಸಮಯ ತೆಗೆದುಕೊಳ್ಳಲಿದೆ. ಇದಕ್ಕಾಗಿ ಎಲ್ಲರೂ ಜೊತೆಗೂಡಿ ಶ್ರಮಿಸಬೇಕು’ ಎಂದು ಬೈಡನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.