ಶನಿವಾರ, ಮೇ 28, 2022
22 °C

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರಿಗೆ ಕೋವಿಡ್–19 ದೃಢ

ಪ್ರಜಾವಾಣಿ ವೆಬ್‌‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಸೀಯಾಟೆಲ್: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಹಾಗೂ ಜಗತ್ತಿನ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಅವರಿಗೆ ಕೋವಿಡ್–19 ದೃಢಪಟ್ಟಿದೆ.

ಈ ವಿಚಾರವನ್ನು ಸ್ವತಃ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ‘ನಾನು ಕೋವಿಡ್–19 ಸೋಂಕಿತನಾಗಿದ್ದೇನೆ. ಸೌಮ್ಯ ಲಕ್ಷಣಗಳು ಕಂಡು ಬಂದಿದ್ದು, ಆರೋಗ್ಯ ಚೇತರಿಸಿಕೊಳ್ಳುವವರೆಗೂ ಪ್ರತ್ಯೇಕ ವಾಸದಲ್ಲಿರುತ್ತೇನೆ’ ಎಂದು ತಿಳಿಸಿದ್ದಾರೆ.

‘ಅದೃಷ್ಟವಶಾತ್ ನಾನು ಲಸಿಕೆ ಪಡೆದಿದ್ದೇನೆ. ಹಾಗೂ ಉತ್ತಮ ಚಿಕಿತ್ಸೆ ಪಡೆಯುವಲ್ಲಿ ಅವಕಾಶಗಳು ಇರುವುದು ನನ್ನನ್ನು ಭಯ ಮುಕ್ತನನ್ನಾಗಿ ಮಾಡಿದೆ’ ಎಂದು ಹೇಳಿದ್ದಾರೆ.

 

ಬಿಲ್‌ ಗೇಟ್ಸ್ ಅವರು ಕೋವಿಡ್–19 ನಂತರ ಜಗತ್ತಿನ ಅನೇಕ ಬಡ ರಾಷ್ಟ್ರಗಳಿಗೆ ಲಸಿಕೆ ಹಾಗೂ ಆರೋಗ್ಯ ಸಲಕರಣೆಗಳಿಗೆ ಉದಾರ ದಾನ ನೀಡಿದ್ದಾರೆ. ಅಲ್ಲದೇ ಬರುವ ದಿನಗಳಲ್ಲಿ 120 ಮಿಲಿಯನ್ ಡಾಲರ್‌ ಅನ್ನು ಔಷಧಿಗಳ ಖರೀದಿಗಾಗಿ ಬಡ ರಾಷ್ಟ್ರಗಳಿಗೆ ನೀಡುವುದಾಗಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು