ಟೊರೊಂಟೊ:ಕೆನಡಾಕ್ಕೆ ಕೋವಿಡ್ 19 ಲಸಿಕೆಗಳನ್ನು ಪೂರೈಸಿದ ಭಾರತ ದೇಶ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಆ ದೇಶವು ವಿಶಿಷ್ಟವಾಗಿ ಧನ್ಯವಾದ ತಿಳಿಸಿದೆ.

ಗ್ರೇಟರ್ ಟೊರೊಂಟೊ ಪ್ರದೇಶದಲ್ಲಿ ಜಾಹೀರಾತು ಫಲಕಗಳಲ್ಲಿ ಮೋದಿ ಭಾವಚಿತ್ರ ಹಾಕಿ ಧನ್ಯವಾದ ತಿಳಿಸಲಾಗಿದೆ. ಕೆನಡಾಗೆ ಲಸಿಕೆ ಪೂರೈಸಿದ್ದಕ್ಕೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆಧನ್ಯವಾದ. ಭಾರತ ಮತ್ತು ಕೆನಡಾ ಸ್ನೇಹ ಚಿರಕಾಲ ಇರಲಿದೆ ಎಂದು ಜಾಹೀರಾತು ಫಲಕದಲ್ಲಿ ಕೆನಡಾ ಧನ್ಯವಾದ ತಿಳಿಸಿದೆ.

ವಿಶ್ವದ ವಿವಿಧ ರಾಷ್ಟ್ರಗಳಿಗೆ ಲಸಿಕೆಗಳನ್ನು ಪೂರೈಸುವಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಮಿತ್ರರಾಷ್ಟ್ರಗಳ ಜೊತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಯಂತಹ ಜಾಗತಿಕ ಸಂಸ್ಥೆಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ ವಾರ, ಕೆನಡಾವು 500,000 ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಪಡೆದುಕೊಂಡಿದೆ. ಕೆನಡಾದ ಪಾಲುದಾರ ಸಂಸ್ಥೆ ವೆರಿಟಿ ಫಾರ್ಮಾಸ್ಯುಟಿಕಲ್ಸ್ ಈ ಲಸಿಕೆಗಳನ್ನು ಸ್ವೀಕರಿಸಿದೆ.

ಕೆಲ ದಿನಗಳ ಹಿಂದಷ್ಟೇ, ವರ್ಚುವಲ್ ಇಂಡಿಯಾ-ಸ್ವೀಡನ್ ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಇದುವರೆಗೆ 50ಕ್ಕೂ ಹೆಚ್ಚು ದೇಶಗಳಿಗೆ 'ಮೇಡ್-ಇನ್-ಇಂಡಿಯಾ' ಲಸಿಕೆಗಳನ್ನು ಸರಬರಾಜು ಮಾಡಲಾಗಿದೆ ಎಂದು ಹೇಳಿದ್ದರು. ಮುಂಬರುವ ಕೆಲ ತಿಂಗಳುಗಳಲ್ಲಿ ಮತ್ತಷ್ಟು ದೇಶಗಳಿಗೆ ಲಸಿಕೆಗಳನ್ನು ಪೂರೈಸುವ ಯೋಜನೆ ನಮ್ಮದಾಗಿದೆ ಎಂದು ಅವರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.