ಬುಧವಾರ, ಮೇ 12, 2021
27 °C

ಅಂತರರಾಷ್ಟ್ರೀಯ ಪ್ರಯಾಣ– ’ಕೆಂಪು ಪಟ್ಟಿ‘ಗೆ ಭಾರತ: ಬ್ರಿಟನ್‌ ಸರ್ಕಾರ ತೀರ್ಮಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌:  ಕೋವಿಡ್‌–19 ಪ್ರಯಾಣ ಕುರಿತ ಕೆಂಪು ಪಟ್ಟಿಗೆ ಬ್ರಿಟನ್‌ ಸೋಮವಾರ ಭಾರತವನ್ನು ಸೇರಿಸಿದ್ದು, ಈ ದೇಶಕ್ಕೆ ಎಲ್ಲ ರೀತಿಯ ಸಂಚಾರವನ್ನು ರದ್ದುಪಡಿಸಿದೆ. ಭಾರತದಿಂದ ಮರಳುವ ಬ್ರಿಟನ್‌ನ ಎಲ್ಲ ಪ್ರಯಾಣಿಕರಿಗೆ 10 ದಿನದ ಕ್ವಾರಂಟೈನ್ ಅನ್ನೂ ಕಡ್ಡಾಯಪಡಿಸಿದೆ.

ಆರೋಗ್ಯ ಕಾರ್ಯದರ್ಶಿ ಮ್ಯಾಟ್‌ ಹ್ಯಾಂಕೊಕ್ ಅವರು ಈ ವಿಷಯ ದೃಢಪಡಿಸಿದ್ದು, ‘ಅಂಕಿ ಅಂಶಗಳ ಪರಿಶೀಲನೆ ಮತ್ತು ಮುನ್ನೆಚ್ಚರಿಕೆಯ ಕ್ರಮವಾಗಿ ನಾವು ಈ ಕಠಿಣವಾದ ಅಥವಾ ತುಂಬ ಮುಖ್ಯವಾದ ತೀರ್ಮಾನ ಕೈಗೊಂಡಿದ್ದು,ಕೆಂಪು ಪಟ್ಟಿಗೆ ಭಾರತವನ್ನು ಸೇರಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಸದ್ಯ ಕಾಣಿಸಿಕೊಂಡಿರುವ ಕೊರೊನಾ ರೂಪಾಂತರ ಸೋಂಕಿನ 103 ಪ್ರಕರಣಗಳು ಬ್ರಿಟನ್‌ನಲ್ಲಿ ಪತ್ತೆಯಾಗಿವೆ. ಬಹುತೇಕ ಅಂತರರಾಷ್ಟ್ರೀಯ ಪ್ರಯಾಣಿಕರಿಗೇ ಇದು ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು