ಮಂಗಳವಾರ, ಜನವರಿ 19, 2021
24 °C
ಬ್ರೆಕ್ಸಿಟ್‌ ಬಳಿಕ ಹೊಸ ಆರ್ಥಿಕತೆಯತ್ತ ಬ್ರಿಟನ್‌

ಬ್ರೆಕ್ಸಿಟ್‌: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಸಂಪೂರ್ಣ ಹೊರ, ಹೊಸ ನಿಯಮಗಳು ಜಾರಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊಸ ವರ್ಷದಿಂದ ಸಂಪೂರ್ಣವಾಗಿ ಹೊರಬಂದಿದ್ದು, ಶುಕ್ರವಾರದಿಂದ ಹೊಸ ಆರ್ಥಿಕತೆಯ ಮಾರ್ಗದಲ್ಲಿ ಸಾಗಲಿದೆ. 

ಐರೋಪ್ಯ ಒಕ್ಕೂಟದ ಜತೆಗಿನ ಸಂಬಂಧವನ್ನು ಬ್ರಿಟನ್‌ ಕಡಿದುಕೊಂಡಿದ್ದು, ಹೊಸ ವರ್ಷದೊಂದಿಗೆ ಹೊಸ ನಿಯಮಗಳು ಜಾರಿಗೆ ಬಂದಿವೆ.

ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳು ಮತ್ತು ಬ್ರಿಟನ್‌ ನಡುವಣ ಮುಕ್ತ ಸಂಚಾರಕ್ಕೆ ಕಡಿವಾಣ ಬಿದ್ದಿದೆ. ಸುಮಾರು 50 ಕೋಟಿ ಮಂದಿ ಈ ರಾಷ್ಟ್ರಗಳ ನಡುವೆ ಮುಕ್ತವಾಗಿ ಸಂಚರಿಸುತ್ತಿದ್ದರು.

ಹೊಸ ವರ್ಷದ ದಿನದಿಂದ ಬ್ರಿಟನ್‌ನ ಗಡಿಗಳಲ್ಲಿ ಹೆಚ್ಚು ಕಟ್ಟೆಚ್ಚರವಹಿಸಲಾಗಿದೆ. ಅದರಲ್ಲೂ ಬಂದರಗಳಲ್ಲಿ ಅತಿ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವ್ಯಾಪಾರ ವಹಿವಾಟು ಮತ್ತು ಸಂಚಾರದ ಮೇಲೆ ಗಮನಹರಿಸಲಾಗಿದೆ.

’ಇದೊಂದು ಅಪೂರ್ವ ಕ್ಷಣ. ನಮ್ಮ ಸ್ವಾತಂತ್ರ್ಯ ನಮ್ಮ ಕೈಯಲ್ಲಿದೆ. ಮುಕ್ತ ವ್ಯಾಪಾರ ಒಪ್ಪಂದಕ್ಕೂ ನಾವು ತೆರೆದುಕೊಳ್ಳಲಿದ್ದೇವೆ’ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಪ್ರತಿಕ್ರಿಯಿಸಿದ್ದಾರೆ.

 ಐರೋಪ್ಯ ಒಕ್ಕೂಟಕ್ಕೆ ಬ್ರಿಟನ್ 2019ರ ಜನವರಿ 31ರಂದು ವಿದಾಯ ಹೇಳಿತ್ತು. ಈ ಮೂಲಕ 2016ರಿಂದ ಇದ್ದ ಗೊಂದಲ, ತಿಕ್ಕಾಟಗಳು ಬಗೆಹರಿದಿದ್ದವು. ಇದರೊಂದಿಗೆ ಆರ್ಥಿಕ, ರಾಜಕೀಯ ಮತ್ತು ಕಾನೂನಾತ್ಮಕ ಒಪ್ಪಂದಗಳ ನಂಟನ್ನು ಕಡಿದುಕೊಂಡಿತ್ತು. 2020ರ ಡಿಸೆಂಬರ್‌ 31ರಿಂದ ಐರೋಪ್ಯ ಒಕ್ಕೂಟದಿಂದ ಸಂಪೂರ್ಣ ವಿಚ್ಛೇದನಗೊಂಡಿದೆ.  2021 ಜನವರಿ 1ರಿಂದ ಬ್ರಿಟನ್‌ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು