ಬುಧವಾರ, ಮಾರ್ಚ್ 22, 2023
21 °C

ಬ್ರಿಟನ್‌ನಲ್ಲಿ ಒಂದು ವಾರದಲ್ಲಿ 50,824 ಡೆಲ್ಟಾ ಪ್ರಕರಣ: ತೀವ್ರ ಆತಂಕ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ಬ್ರಿಟನ್‌ನಲ್ಲಿ ಇತ್ತೀಚಿನ ವಾರದಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ತಳಿಯ 50,824 ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಇಂಗ್ಲೆಂಡ್‌ ಸಾರ್ವಜನಿಕ ಆರೋಗ್ಯ (ಪಿಎಚ್‌ಇ) ಸಂಸ್ಥೆ ಶುಕ್ರವಾರ ಹೇಳಿದೆ.

ಅತಿ ವೇಗವಾಗಿ ಹರಡುವ ಡೆಲ್ಟಾ ತಳಿಯು ‘ಅತಂಕಕಾರಿ‘ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಘೋಷಣೆ ಮಾಡಿದೆ.

50,824 ಸೋಂಕು ಪ್ರಕರಣಗಳೂ ಸೇರಿದಂತೆ ಡೆಲ್ಟಾ ತಳಿಯ ಒಟ್ಟು 161,981 ಪ್ರಕರಣಗಳು ಇಂಗ್ಲೆಂಡ್‌ನಲ್ಲಿ ದೃಢಪಟ್ಟಿವೆ. ಕಳೆದ ವಾರಕ್ಕೆ ಹೋಲಿಸಿಕೊಂಡರೆ ಈ ವಾರ ಅದರ ಪ್ರಮಾಣ ಶೇ. 46% ಹೆಚ್ಚಾಗಿದೆ ಎಂದು ಪಿಎಚ್‌ಇ ಹೇಳಿದೆ.

ಕೋವಿಡ್‌–19ರ ಡೆಲ್ಟಾ ರೂಪಾಂತರ ತಳಿಯು ವೇಗವಾಗಿ ಮತ್ತು ವ್ಯಾಪಕವಾಗಿ ಹರಡುತ್ತಿದೆ. ಜಗತ್ತಿನಾದ್ಯಂತ ಮತ್ತೊಂದು ಬಾರಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗಲು ಇದು ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಸುಮಾರು ನೂರು ದೇಶಗಳಲ್ಲಿ ಡೆಲ್ಟಾ ರೂಪಾಂತರ ತಳಿ ಪತ್ತೆಯಾಗಿದೆ. ಅತಿ ವೇಗವಾಗಿ ಹರಡುವ ಸಾಮರ್ಥ್ಯ ಇರುವ ಈ ತಳಿಯು ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾಗಿರುವ ಕೊರೊನಾ ವೈರಾಣು ತಳಿ ಎನಿಸಿಕೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಗುರುವಾರ ಎಚ್ಚರಿಕೆ ನೀಡಿದೆ.

ಸಾರ್ಸ್‌ ಕೋವ್‌–2 (ಕೊರೊನಾ ವೈರಸ್‌)ನಿಂದ ರೂಪಾಂತರಗೊಂಡು ಸೃಷ್ಟಿಯಾಗಿರುವ ಡೆಲ್ಟಾ(ಬಿ16172) ಮೊದಲಿಗೆ ಪತ್ತೆಯಾಗಿದ್ದು ಭಾರತದಲ್ಲಿ.

ಇದನ್ನೂ ಓದಿ... ಕೊರೊನಾ ಬಿಕ್ಕಟ್ಟು: ವಿದೇಶಿ ಪ್ರಯಾಣಿಕರ ಸಂಖ್ಯೆಗೆ ಕಡಿವಾಣ ಹಾಕಿದ ಆಸ್ಟ್ರೇಲಿಯಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು