ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಧರ್ಮ ನಿಷ್ಠೆಯೇ ವಜಾಕ್ಕೆ ಕಾರಣ: ಪಾಕ್‌ ಮೂಲದ ಬ್ರಿಟನ್‌ ಸಂಸದೆ ಆರೋಪ

Last Updated 23 ಜನವರಿ 2022, 14:35 IST
ಅಕ್ಷರ ಗಾತ್ರ

ಲಂಡನ್‌: ಕನ್ಸರ್ವೇಟಿವ್‌ ಪಕ್ಷದ ಸರ್ಕಾರವು ತಮ್ಮನ್ನು 2020ರ ಫೆಬ್ರುವರಿಯಲ್ಲಿ ಸಚಿವ ಸ್ಥಾನದಿಂದ ವಜಾಗೊಳಿಸಿದೆ. ಮುಸ್ಲಿ ಧರ್ಮದಲ್ಲಿ ತಮಗೆ ಇದ್ದ ನಂಬಿಕೆಯೇ ಇದಕ್ಕೆ ಕಾರಣ ಎಂದು ಪಾಕಿಸ್ತಾನ ಮೂಲದ ಬ್ರಿಟನ್‌ ಸಂಸದೆಯೊಬ್ಬರು ಭಾನುವಾರ ಆರೋಪಿಸಿದ್ದಾರೆ.

2018ರ ಮಾಜಿ ಪ್ರಧಾನಿ ತೆರೆಸಾ ಮೇ ಅವರ ಆಡಳಿತದಲ್ಲಿ ಬ್ರಿಟನ್‌ನ ಸಾರಿಗೆ ಇಲಾಖೆಯಲ್ಲಿ ಕಿರಿಯ ಸಚಿವಾಲಯದ ಹುದ್ದೆಯೊಂದಕ್ಕೆ ನುಸ್ರತ್ ಘನಿ (49) ಅವರನ್ನು ನೇಮಿಸಲಾಗಿತ್ತು. ಆದರೆ 2020ರ ಫೆಬ್ರುವರಿಯಲ್ಲಿ ಬಂದ ಪ್ರಧಾನಿ ಬೋರಿಸ್‌ ಜಾನ್ಸನ್‌ರ ಸರ್ಕಾರದ ಪುನರ್‌ರಚನೆಯಲ್ಲಿ ನುಸ್ರತ್‌ ಅವರು ಸಚಿವ ಸ್ಥಾನದಿಂದ ವಂಚಿತರಾಗಬೇಕಾಯಿತು. ತಮಗೆ ಮುಸ್ಲಿಂ ಧರ್ಮದ ಮೇಲಿದ್ದ ನಂಬಿಕೆಯ ಕಾರಣದಿಂದ ಈ ಕ್ರಮ ಕೈಗೊಳ್ಳಲಾಯಿತು ಎಂದು ದಿ ಸಂಡೇ ಟೈಮ್ಸ್‌ ಪತ್ರಿಕೆಗೆ ನುಸ್ರತ್‌ ಹೇಳಿದ್ದಾರೆ.

‘ನನ್ನನ್ನು ವಜಾಗೊಳಿಸಿದ್ದರ ಹಿಂದಿನ ಕಾರಣವನ್ನು ನಾನು ಕೇಳಿದೆ. ಮುಸ್ಲಿ ಧರ್ಮದ ಮೇಲಿನ ನನ್ನ ನಂಬಿಕೆಯೇ ಮುಖ್ಯ ಸಮಸ್ಯೆಯಾಗಿ ಪ್ರಸ್ತಾಪವಾಯಿತು ಎಂದು ನನಗೆ ತಿಳಿಸಲಾಯಿತು. ನಾನು ಮುಸ್ಲಿಂ ಸಚಿವೆ ಆಗಿರುವುದು ಅನೇಕ ನನ್ನ ಸಹೋದ್ಯೋಗಿಗಳಿಗೆ ಮುಜುಗರವನ್ನುಂಟು ಮಾಡಿದೆ. ನಾನು ಪಕ್ಷಕ್ಕೆ ನಿಷ್ಠಳಾಗಿಲ್ಲ ಎಂದು ಹೇಳಲಾಗಿದೆ’ ಎಂದು ನುಸ್ರತ್‌ ಘನಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕನ್ಸರ್ವೇಟಿವ್‌ ಪಕ್ಷದ ಮುಖ್ಯ ಸಚೇತಕ ಮಾರ್ಕ್‌ ಸ್ಪೆನ್ಸರ್‌, ‘ನುಸ್ರತ್‌ ಘನಿ ಅವರ ಆರೋಪಗಳು ಸಂಪೂರ್ಣ ಸುಳ್ಳು’ ಎಂದು ಟ್ವೀಟ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT