ಗುರುವಾರ , ಅಕ್ಟೋಬರ್ 29, 2020
21 °C
ಕೋವಿಡ್‌–19 ತಂದ ಸಂಕಷ್ಟ

ಕೋವಿಡ್ ಪರಿಣಾಮ: 2021ಕ್ಕೆ 15 ಕೋಟಿ ಅತಿ ಕಡುಬಡವರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕೋವಿಡ್‌–19 ತಂದ ಸಂಕಷ್ಟದಿಂದಾಗಿ 15 ಕೋಟಿ ಮಂದಿ ಅತ್ಯಂತ ಕಡುಬಡತನಕ್ಕೆ ಸಿಲುಕಲಿದ್ದಾರೆ ಎಂದು ವಿಶ್ವ ಬ್ಯಾಂಕ್‌ ಬುಧವಾರ ಎಚ್ಚರಿಕೆ ನೀಡಿದೆ.

ಹೀಗಾಗಿ, ‘ವಿಭಿನ್ನ ಆರ್ಥಿಕತೆ’ಗೆ ಎಲ್ಲ ರಾಷ್ಟ್ರಗಳು ತೆರೆದುಕೊಳ್ಳಬೇಕು. ಬಂಡವಾಳ, ಕೌಶಲ ಮತ್ತು ಆವಿಷ್ಕಾರಗಳಿಗೆ ಉದ್ಯಮ ವಲಯವು ಅವಕಾಶಗಳನ್ನು ಕಲ್ಪಿಸಬೇಕು ಎಂದು ತಿಳಿಸಿದೆ.

ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಈ ವರ್ಷವೇ  8.8 ಕೋಟಿಯಿಂದ 11.5 ಕೋಟಿ ಮಂದಿ ಬಡತನಕ್ಕೆ ಸಿಲುಕಲಿದ್ದಾರೆ ಎಂದು ವಿಶ್ವಬ್ಯಾಂಕ್‌ನ ಬಡತನ ಮತ್ತು ಪ್ರಗತಿ ಕುರಿತ ವರದಿ ವಿವರಿಸಿದೆ.

ಕೋವಿಡ್‌ ಸಾಂಕ್ರಾಮಿಕ ಕಾಯಿಲೆ ಮತ್ತು ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಜಗತ್ತಿನ ಒಟ್ಟು ಜನಸಂಖ್ಯೆಯ ಶೇಕಡ 1.4 ಮಂದಿ ಅತ್ಯಂತ ಕಡುಬಡತನಕ್ಕೆ ಸಿಲುಕಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಅತಿ ಹೆಚ್ಚು ಬಡವರು ಇರುವ ದೇಶಗಳಲ್ಲೇ ಮತ್ತಷ್ಟು ಬಡವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.  ಕಡುಬಡತನಕ್ಕೆ ಸಿಲುಕವವರಲ್ಲಿ ಶೇಕಡ 82ರಷ್ಟು ಮಂದಿ ಮಧ್ಯಮ ವರ್ಗದವರು ಎಂದು ವಿಶ್ವ ಬ್ಯಾಂಕ್‌ ವರದಿ ಅಂದಾಜಿಸಿದೆ.

2030ಕ್ಕೆ ಬಡತನ ನಿರ್ಮೂಲನೆ ಮಾಡುವ ಉದ್ದೇಶಕ್ಕೆ ಕೋವಿಡ್‌–19, ಹವಾಮಾನ ಬದಲಾವಣೆ ತಡೆಯೊಡ್ಡಿವೆ. 2030ಕ್ಕೆ ಜಾಗತಿಕ ಬಡತನ ಪ್ರಮಾಣ ದರ ಶೇಕಡ 7ರಷ್ಟು ಇರಲಿದೆ ಎಂದು ಉಲ್ಲೇಖಿಸಲಾಗಿದೆ.

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಕುರಿತು ಇತ್ತೀಚಿನ ಮಾಹಿತಿ ದೊರೆತಿಲ್ಲ. ಹೀಗಾಗಿ, ಜಾಗತಿಕ ಬಡತನದ ಬಗ್ಗೆ ಸಮಗ್ರವಾಗಿ ವರದಿ ಸಿದ್ಧಪಡಿಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು