ಸ್ಯಾನ್ ಫ್ರಾನ್ಸಿಸ್ಕೋ: ಕೋವಿಡ್ 19 ಸಾಂಕ್ರಾಮಿಕ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಈಗ ಸಂಪೂರ್ಣ ಲಾಕ್ ಡೌನ್ ತೆರವುಗೊಳಿಸಲಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಲಾಕ್‌ಡೌನ್ ತೆರವುಗೊಳಿಸಿದ ಅಮೆರಿಕದ ಮೊದಲ ರಾಜ್ಯ ಎನಿಸಿಕೊಂಡಿದೆ.

ಹೆಚ್ಚಿನ ರಾಜ್ಯಗಳಲ್ಲಿ ಮಂಗಳವಾರದಿಂದಲೇ ರೆಸ್ಟೋರೆಂಟ್, ಬಾರ್‌ಗಳು, ಸೂಪರ್ ಮಾರ್ಕೆಟ್‌ಗಳು, ಜಿಮ್ಸ್, ಕ್ರೀಡಾಂಗಣಗಳು ಹಾಗೂ ಉಳಿದ ಸ್ಥಳಗಳು ಸಾಮಾಜಿಕ ಅಂತರ ಕಾಪಾಡುವ ಮತ್ತು ಜನದಟ್ಟಣೆಗೆ ಮಿತಿ ವಿಧಿಸುವಂತಹ ನಿಯಮಗಳಿಂದ ಮುಕ್ತವಾಗಿವೆ. ಆದರೆ, ಜನರು ಮಾಸ್ಕ್ ಧರಿಸಿಕೊಂಡಿರುವುದು ಸಾಂಕ್ರಾಮಿಕದ ವಿರುದ್ಧದ ಹೋರಾಟದ ಸಂಕೇತವಾಗಿ ಕಾಣಿಸುತ್ತದೆ. ಇನ್ನು ಮುಂದೆ ಲಸಿಕೆ ಹಾಕಿಸಿಕೊಂಡವರಷ್ಟೇ ವ್ಯವಹಾರಗಳಲ್ಲಿ ಭಾಗವಹಿಸುವುದು ಕಡ್ಡಾಯ ಎನ್ನುವ ನಿಯಮವೂ ಇಲ್ಲವಾಗಲಿದೆ.

ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ 2020ರ ಮಾರ್ಚ್‌ನಲ್ಲಿ ಲಾಕ್‌ಡೌನ್‌ನಿಂದಾಗಿ ಸ್ತಬ್ಧಗೊಂಡಿದ್ದ ಕ್ಯಾಲಿಫೋರ್ನಿಯಾದಲ್ಲಿ 15 ತಿಂಗಳ ನಂತರ ಮೊದಲ ಬಾರಿಗೆ ಆರ್ಥಿಕ ಚಟುವಟಿಕೆಯು ಸಂಪೂರ್ಣ ಪುನರಾರಂಭಗೊಳ್ಳುತ್ತಿದೆ. ಜನರು ಸಾಂಕ್ರಾಮಿಕ ಪೂರ್ವದ ಜೀವನಶೈಲಿಗೆ ಮರಳುತ್ತಿದ್ದಾರೆ. ಡಾಡ್ಜರ್ಸ್ ಮತ್ತು ಜೈಂಟ್ಸ್ ಆಟಗಳನ್ನು ಅಭಿಮಾನಿಗಳು ಮಾಸ್ಕ್ ರಹಿತವಾಗಿ ವೀಕ್ಷಣೆ ಮಾಡುವ ದಿನಗಳು ಬಂದಿವೆ. ಡಿಸ್ನಿಲ್ಯಾಂಡ್ ಎಲ್ಲಾ ಪ್ರವಾಸಿಗರಿಗೂ ತನ್ನ ಬಾಗಿಲು ತೆರೆದು, ಸ್ವಾಗತಿಸುತ್ತಿದೆ. ಜನರು ಲಾಸ್ ಏಂಜಲೀಸ್‌ನ ಸನ್ಸೆಟ್ ಸ್ಟ್ರಿಪ್‌ನಿಂದ ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಸ್ಟ್ರೊವರೆಗೆ ಒಳಾಂಗಣ ಬಾರ್ ಮತ್ತು ನೈಟ್‌ಕ್ಲಬ್‌ಗಳಲ್ಲೂ ಮತ್ತೆ ಸೇರಿ, ಹಳೆಯ ದಿನಗಳನ್ನು ಮೆಲುಕು ಹಾಕಲಾರಂಭಿಸಿದ್ದಾರೆ. ಬೇಸಿಗೆಯ ಸಮಯ ಬಂದಿರುವಾಗ ಜನಜೀವನವು ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವ ಸಂದೇಶವನ್ನು ಕ್ಯಾಲಿಫೋರ್ನಿಯಾ ರವಾನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.