ಭಾನುವಾರ, ಜನವರಿ 17, 2021
17 °C

ಕೆನಡಾ: ಸಂಪುಟ ಪುನರ್‌ ರಚಿಸಿದ ಪ್ರಧಾನಿ ಜಸ್ಟಿನ್‌ ಟ್ರುಡೊ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೊರೊಂಟೊ: ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು ಸಂಪುಟವನ್ನು ಪುನರ್ ರಚನೆ ಮಾಡಿದ್ದಾರೆ. ಭಾರತೀಯ ಕೆನಡಿಯನ್‌ ಸಿಖ್‌ ನವದೀಪ್‌ ಬೇನ್ಸ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸಂಪುಟವನ್ನು ಪುನರ್‌ರಚಿಸಲಾಗಿದೆ.

ಸಾರಿಗೆ ಸಚಿವರಾಗಿದ್ದ ಮಾಜಿ ಗಗನಯಾನಿ ಮಾರ್ಕ್‌ ಗಾರ್ನೊ ಅವರನ್ನು ವಿದೇಶಾಂಗ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ವಿದೇಶಾಂಗ ಸಚಿವರಾಗಿದ್ದ ಫ್ರಾಂಕೊ–ಫಿಲಿಪ್ ಶಾಂಪೇನ್‌ ಅವರಿಗೆ ಬೇನ್ಸ್‌ ನಿರ್ವಹಿಸಿದ್ದ ಖಾತೆಯ ಜವಾಬ್ದಾರಿ ನೀಡಲಾಗಿದೆ.

‘ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು ಎಂಬ ಉದ್ದೇಶದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ನವದೀಪ್‌ ಬೇನ್ಸ್‌ ಪ್ರಕಟಿಸಿದ್ದಾರೆ. ತೆರವಾದ ಈ ಸ್ಥಾನವನ್ನು ತುಂಬುವ ಸಲುವಾಗಿ ಸಂಪುಟದಲ್ಲಿ ಬದಲಾವಣೆ ಮಾಡುತ್ತಿದ್ದೇವೆ’ ಎಂದು ಟ್ರುಡೊ ಟ್ವೀಟ್‌ ಮಾಡಿದ್ದಾರೆ.

ಬೇನ್ಸ್‌ ಅವರು ನಾವೀನ್ಯ, ವಿಜ್ಞಾನ ಮತ್ತು ಕೈಗಾರಿಕಾ ಸಚಿವರಾಗಿದ್ದರು. 2013ರಲ್ಲಿ ಟ್ರುಡೊ ಅವರಿಗೆ ನಾಯಕತ್ವ ಸಿಗುವಂತೆ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು