ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕನ್ನರಿಗೆ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್: ಸಿಡಿಸಿ ಶಿಫಾರಸು

Last Updated 22 ಅಕ್ಟೋಬರ್ 2021, 4:26 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಜನರಿಗೆ ಮಾಡರ್ನಾ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಕೋವಿಡ್ -19 ಲಸಿಕೆಯ ಬೂಸ್ಟರ್ ಡೋಸ್ ನೀಡಲು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ(ಸಿಡಿಸಿ)ಯು ಶಿಫಾರಸು ಮಾಡಿದೆ.

ಕಳೆದ ತಿಂಗಳು ಫೈಜರ್ ಲಸಿಕೆಯ ಬೂಸ್ಟರ್ ಡೋಸ್‌ಗೆ ಸಂಸ್ಥೆ ಅನುಮೋದನೆ ನೀಡಿತ್ತು. ಶುಕ್ರವಾರದಿಂದಲೇ ಅಮೆರಿಕನ್ನರು ಬೂಸ್ಟರ್ ಡೋಸ್ ಪಡೆಯಲು ಸಂಸ್ಥೆ ಬಾಗಿಲು ತೆರೆದಿದೆ.

ಕೋವಿಡ್ ಲಸಿಕೆಗಳು ‘ವ್ಯಾಪಕವಾಗಿ ಹರಡುವ ಡೆಲ್ಟಾ ರೂಪಾಂತರದ ನಡುವೆಯೂ, ತೀವ್ರ ರೋಗ, ಆಸ್ಪತ್ರೆಗೆ ದಾಖಲು ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ’ ಎಂದು ಸಿಡಿಸಿ ನಿರ್ದೇಶಕರಾದ ಡಾ ರೋಚೆಲ್ ವಾಲೆನ್ಸ್ಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಅನುಮೋದನೆಯು, ಎಲ್ಲಾ ವಯಸ್ಕರಿಗೆ ಬೂಸ್ಟರ್‌ ಡೋಸ್‌ಗಳನ್ನು ನೀಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಆಗಸ್ಟ್‌ನಲ್ಲಿ ಕೊಟ್ಟಿದ್ದ ಭರವಸೆ ಈಡೇರಿಸಲು ಅನುವು ಮಾಡಿಕೊಟ್ಟಿದೆ. ಸದ್ಯ, ಅಮೆರಿಕದಲ್ಲಿ ಪ್ರತಿದಿನವೂ ಸುಮಾರು 75,000 ಹೊಸ ಪ್ರಕರಣಗಳು ಮತ್ತು ಸುಮಾರು 1,500 ಕೋವಿಡ್ ಸಾವುಗಳು ಸಂಭವಿಸುತ್ತಿವೆ.

ತೀವ್ರವಾದ ರೋಗ ಮತ್ತು ಸಾವಿನ ವಿರುದ್ಧ ಲಸಿಕೆಗಳು ಅತ್ಯಂತ ಪರಿಣಾಮಕಾರಿಯಾಗಿವೆ ಎಂದು ಅಧ್ಯಯನಗಳು ತೋರಿಸಿವೆ. ಆದರೂ ಅವುಗಳ ಪರಿಣಾಮಕಾರಿತ್ವವು ರೂಪಾಂತರಿ ಸೋಂಕುಗಳ ವಿರುದ್ಧ ಕಡಿಮೆಯಾಗಬಹುದು. ವಿಶೇಷವಾಗಿ ಈ ಬೇಸಿಗೆಯಲ್ಲಿ ದೇಶದಾದ್ಯಂತ ಹರಡಿದ ಡೆಲ್ಟಾ ರೂಪಾಂತರದ ಲಸಿಕೆ ಪರಿಣಾಮ ಅಷ್ಟಾಗಿ ಕಂಡುಬಂದಿಲ್ಲ.

ಲಸಿಕೆಗಳ ಉದ್ದೇಶವು ತೀವ್ರವಾದ ಅನಾರೋಗ್ಯವನ್ನು ತಡೆಗಟ್ಟುವುದೇ ಹೊರತು ಸೋಂಕನ್ನು ತಡೆಗಟ್ಟುವುದಲ್ಲ ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ತಜ್ಞ ಮತ್ತು ಸಿಡಿಸಿ ಪ್ಯಾನಲ್‌ನ ಸದಸ್ಯ , ಡಾ. ವಿಲ್ಬರ್ ಚೆನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT