ಮಂಗಳವಾರ, ಅಕ್ಟೋಬರ್ 4, 2022
27 °C

ಉಸಿರಿನ ಮೂಲಕ ಪಡೆಯಬಹುದಾದ ವಿಶ್ವದ ಮೊದಲ ಕೋವಿಡ್ ಲಸಿಕೆಗೆ ಚೀನಾ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಟಿಯಾಂಜಿನ್‌ ಮೂಲದ ಔಷಧ ತಯಾರಕ ಕಂಪನಿ 'ಕ್ಯಾನ್‌ಸಿನೊ ಬಯಾಲಜಿಸ್‌' ಉಸಿರಾಟದ ಮೂಲಕವೇ ಪಡೆಯಬಹುದಾದ ವಿಶ್ವದ ಮೊದಲ ಕೋವಿಡ್–19 ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಚೀನಾದ ಔಷಧ ನಿಯಂತ್ರಕಗಳು ಅನುಮೋದನೆ ನೀಡಿವೆ ಎಂದು ವರದಿಯಾಗಿದೆ.

ಬೂಸ್ಟರ್‌ ಲಸಿಕೆ ರೀತಿಯಲ್ಲಿ ತುರ್ತು ಬಳಕೆಗೆ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನಗಳ ಆಡಳಿತವು ಅನುಮತಿ ನೀಡಿದೆ ಎಂದು ಕಂಪನಿಯು ಹಾಂಗ್‌ಕಾಂಗ್ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಭಾನುವಾರ ಹೇಳಿಕೆ ನೀಡಿದೆ.

ಲಸಿಕೆಗೆ ಅನುಮೋದನೆ ಸಿಗುತ್ತಿದ್ದಂತೆಯೇ ಕಂಪನಿಯ ಷೇರು ಮೌಲ್ಯ ಸೋಮವಾರ ಶೇ 7 ರಷ್ಟು ಏರಿಕೆ ಕಂಡಿವೆ.

ನೆಬ್ಯುಲೈಸರ್‌ ಮೂಲಕ ಹಾಕಬಹುದಾದ ಈ ಲಸಿಕೆಯನ್ನು ಸೂಜಿ ಇಲ್ಲದೆ ತುಂಬಾ ಸುಲಭವಾಗಿ ವಿತರಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ. ಆದರೆ, ಲಸಿಕೆಯೆ ಯಾವಾಗಿನಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಅಮೆರಿಕ, ಕ್ಯೂಬಾ, ಕೆನಡಾ ಸೇರಿದಂತೆ ಹಲವು ದೇಶಗಳ ವಿಜ್ಞಾನಿಗಳು ಉಸಿರಾಟದ ಮೂಲಕ ಪಡೆಯಬಹುದಾದ ಲಸಿಕೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಚೀನಾ 2020ರಿಂದ ಇಲ್ಲಿಯವರೆಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾದ, ಇಂಜೆಕ್ಷನ್‌ ಮೂಲಕ ಪಡೆಯಬಹುದಾದ ಎಂಟು ಲಸಿಕೆಗಳಿಗೆ ಅನುಮೋದನೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು