ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಬಿಕ್ಕಟ್ಟು: ಚೀನಾದಲ್ಲಿ ಕೆಲವೆಡೆ ಲಾಕ್‌ಡೌನ್ ವಿಸ್ತರಣೆ

ರಾಜಕೀಯ ಕಾರ್ಯಕ್ರಮಗಳು ವಿಳಂಬವಾಗುವ ಸಾಧ್ಯತೆ
Last Updated 12 ಜನವರಿ 2021, 5:49 IST
ಅಕ್ಷರ ಗಾತ್ರ

ಬೀಜಿಂಗ್: ಕೋವಿಡ್‌ 19 ಬಿಕ್ಕಟ್ಟಿನಿಂದಾಗಿ ಚೀನಾದ ಕೆಲವು ನಗರಗಳಲ್ಲಿ ಲಾಕ್‌ಡೌನ್ ವಿಸ್ತರಿಸಲಾಗಿದ್ದು, ಪರಿಣಾಮವಾಗಿ ಬೀಜಿಂಗ್‌ ಪ್ರಾಂತ್ಯದಲ್ಲಿ ನಡೆಯಬೇಕಿದ್ದ ಎಲ್ಲ ರಾಜಕೀಯ ಸಮಾರಂಭಗಳು, ಸಮ್ಮೇಳನಗಳನ್ನು ಮುಂದೂಡಲಾಗಿದೆ.

ಮಂಗಳವಾರದಿಂದ ಏಳು ದಿನಗಳ ಕಾಲ ಮನೆಯಲ್ಲೇ ಇರುವಂತೆ ಬೀಜಿಂಗ್‌ನ ದಕ್ಷಿಣ ಭಾಗದಲ್ಲಿರುವ ಗುವಾನ್‌ ನಗರದ ನಿವಾಸಿಗಳಿಗೆ ಆದೇಶಿಸಲಾಗಿದೆ. ಮೊದಲ ಬಾರಿಗೆ ಕೊರೊನಾವೈರಸ್‌ ಸೋಂಕಿನ ಪ್ರಕರಣ ಕಾಣಿಸಿಕೊಂಡ ವುಹಾನ್ ನಗರ ಸೇರಿದಂತೆ ಚೀನಾದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಲಾಕ್‌ಡೌನ್ ಆದೇಶವನ್ನು ಜಾರಿ ಮಾಡಲಾಗಿದೆ.

ಕಳೆದ ವರ್ಷ ಬೀಜಿಂಗ್‌ನಲ್ಲಿ ಮಾರ್ಚ್‌ನಿಂದ ಮೇ ವರೆಗೆ ನಡೆಯಬೇಕಿದ್ದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌(ಎನ್‌ಪಿಸಿ) ಮತ್ತು ಅದರ ಸಲಹಾ ಸಮಿತಿ ಸಭೆಯನ್ನು ಕೋವಿಡ್‌ ಕಾರಣದಿಂದಾಗಿ ಮುಂದೂಡಲಾಗಿತ್ತು.

ಹೆಬಿಯಲ್ಲಿ ಪ್ರತಿ ವರ್ಷ ಫೆಬ್ರವರಿಯಲ್ಲಿ ನಡೆಯತ್ತಿದ್ದ ಪ್ರಾಂತೀಯ ಪೀಪಲ್ಸ್‌ ಕಾಂಗ್ರೆಸ್ ಮತ್ತು ಅದರ ಸಲಹಾ ಸಮಿತಿಯ ಸಭೆ ಈ ಬಾರಿ ವಿಳಂಬವಾಗುವ ಸಾಧ್ಯತೆ ಇದೆ. ಈ ಸಭೆ ಯಾವಾಗ ನಡೆಯುತ್ತದೆ ಎಂದು ಸ್ಪಷ್ಟವಾಗಿಲ್ಲ.

ಈ ಪ್ರಾಂತ್ಯದಲ್ಲಿ 40 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿರುವ ಕುರಿತು ಆರೋಗ್ಯ ಆಯೋಗ ಖಚಿತಪಡಿಸಿದೆ. ದಕ್ಷಿಣ ಬೀಜಿಂಗ್‌ನಲ್ಲಿರುವ ಹುಬೆ ರಾಜಧಾನಿ ಶಿಜಿಯಾಝುವಾಂಗ್‌ ನಗರದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಈ ಪ್ರದೇಶದಲ್ಲಿರುವ ನಿವಾಸಿಗಳಿಗೆ ಮನೆಯಲ್ಲೇ ಇರುವಂತೆ ಸರ್ಕಾರ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT