ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ನಾಳೆ ಆಗ್ನೇಯ ಏಷ್ಯಾರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ

ಆರ್ಥಿಕ ಪುನಶ್ಚೇತನ, ಲಸಿಕೆ ಪಾಸ್‌ಪೋರ್ಟ್‌ ಸೃಷ್ಟಿಯಂತಹ ವಿಚಾರಗಳ ಚರ್ಚೆ
Last Updated 7 ಜೂನ್ 2021, 6:14 IST
ಅಕ್ಷರ ಗಾತ್ರ

ಬೀಜಿಂಗ್‌: ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಪ್ರಭಾವ ಬೀರಲು ಚೀನಾ ಮತ್ತು ಅಮೆರಿಕ ಸ್ಪರ್ಧೆಗಿಳಿದಿರುವ ನಡುವೆಯೇ ಚೀನಾ, ಈ ವಾರದಲ್ಲಿ ಆಗ್ನೇಯ ಏಷ್ಯಾದ ಹತ್ತು ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ಆತಿಥ್ಯ ವಹಿಸಿಕೊಂಡಿದೆ.

ಚೀನಾದ ಚಾಂಗ್‌ಕಿಂಗ್‌ನ ನೈರುತ್ಯ ಮೆಗಾಸಿಟಿಯಲ್ಲಿ ಮಂಗಳವಾರ ಈ ವಿದೇಶಾಂಗ ಸಚಿವರ ಸಭೆ ನಡೆಯುವುದಾಗಿ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ.

ಸಭೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಮತ್ತು ಕೋವಿಡ್‌ 19 ನಿಂದ ಹಾನಿಗೊಳಗಾದ ಇತರೆ ಆರ್ಥಿಕ ವಲಯಗಳ ಪುನಶ್ಚೇನತನ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಹೆಚ್ಚು ಸಂಘಟಿತ ಪ್ರಯತ್ನಗಳನ್ನು ನಡೆಸುವುದು ಮತ್ತು ಮುಕ್ತ ಸಂಚಾರಕ್ಕಾಗಿ ಲಸಿಕೆ ಪಾಸ್‌ಪೋರ್ಟ್ ಯೋಜನೆ ರೂಪಿಸುವ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಸಮ್ಮೇಳನದ ಸಂದರ್ಭದಲ್ಲಿ ಇತರ ರಾಷ್ಟ್ರಗಳ ವಿದೇಶಾಂಗ ಸಚಿವರನ್ನು ಪ್ರತ್ಯೇಕವಾಗಿ ಭೇಟಿಯಾಗಿ, ಮಾತುಕತೆ ನಡೆಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT