ಶನಿವಾರ, ಜುಲೈ 24, 2021
21 °C
ಅರುಣಾಚಲ ಪ್ರದೇಶದ ಗಡಿ ಭಾಗದೊಂದಿಗೆ ಟೆಬೆಟ್‌ನ ಲ್ಹಾಸಾ ನಗರ ಸಂಪರ್ಕಿಸುವ ಯೋಜನೆ

ಭಾರತದ ಗಡಿಗೆ ಹೊಂದಿಕೊಂಡಿರುವ ನಗರಗಳಲ್ಲಿ ಚೀನಾದ ಬುಲೆಟ್ ರೈಲು ಸಂಚಾರ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಟೆಬೆಟ್‌ ಪ್ರಾಂತ್ಯದ ರಾಜಧಾನಿ ಲ್ಹಾಸಾದಿಂದ ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ನೈಂಗಿಚಿಯೊ ನಗರವನ್ನು ಸಂಪರ್ಕಿಸುವ ಸಂಪೂರ್ಣ ವಿದ್ಯುದೀಕೃತ ಬುಲೆಟ್‌ ರೈಲು ಶುಕ್ರವಾರದಿಂದ ಕಾರ್ಯಾರಂಭ ಮಾಡಿದೆ.

ಗಡಿ ಭಾಗದ ಸ್ಥಿರತೆಯನ್ನು ಕಾಪಾಡುವಲ್ಲಿ ಬುಲೆಟ್‌ ರೈಲು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಭಾವಿಸಿರುವ ಚೀನಾ, ಆದ್ಯತೆಯ ಮೇರೆಗೆ ಈ ಯೋಜನೆಯನ್ನು ಪೂರ್ಣಗೊಳಿಸುವ ಕ್ರಮ ಕೈಗೊಂಡಿದೆ.‌

ಜುಲೈ 1 ರಂದು ಚೀನಾದ ಕಮ್ಯೂನಿಸ್ಟ್‌ ಪಾರ್ಟಿ(ಸಿಪಿಸಿ) ಶತಮಾನೋತ್ಸವ ಆಚರಣೆಗೆ ಮುನ್ನವೇ ಈ ಮಹತ್ವದ ಯೋಜನೆಯನ್ನು ಚೀನಾ ಪೂರ್ಣಗೊಳಿಸಿ ಕಾರ್ಯಾರಂಭಗೊಳ್ಳುವಂತೆ ಮಾಡಿದೆ.

ಟಿಬೆಟ್‌ ಪ್ರಾಂತ್ಯದಲ್ಲಿ ಮೊದಲು ಕ್ವಿಂಗ್‌ಹೈ-ಟಿಬೆಟ್ ರೈಲ್ವೆ ವಿಭಾಗ ಆಂಭವಾಯಿತು. ಸಿಚುವಾನ್-ಟಿಬೆಟ್ ರೈಲ್ವೆ ಎರಡನೇ ವಿಭಾಗವಾಗಿದೆ. ಸಿಚುವಾನ್ ಪ್ರಾಂತ್ಯದ ರಾಜಧಾನಿ ಚೆಂಗ್ಡುವಿನಿಂದ ಸಿಚುವಾನ್ – ಟಿಬೆಟ್ ರೈಲ್ವೆ ವಿಭಾಗ ಆರಂಭವಾಗುತ್ತದೆ. ಈ ಮಾರ್ಗ ಯಾನ್ ಮೂಲಕ ಹಾದು ಹೋಗುತ್ತದೆ. ಕ್ವಾಮ್ಡೊ ಮೂಲಕ ಟಿಬೆಟ್‌ ತಲುಪುತ್ತದೆ. ಇದು ಚೆಂಗ್ಡು–ಲ್ಹಾಸಾ ನಡುವಿನ ಪ್ರಯಾಣದ ಅವಧಿಯನ್ನು 48 ಗಂಟಗಳಿಂದ 13 ಗಂಟೆಗಳಿಗೆ ಕಡಿತಗೊಳಿಸುವ ಮಾರ್ಗವಾಗಿದೆ.

ಚೀನಾ, ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಹೇಳಿಕೊಂಡಿದೆ. ಇದನ್ನು ಭಾರತ ಬಲವಾಗಿ ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಚೀನಾವು ಭಾರತದೊಂದಿಗೆ 3,488 ಕಿ.ಮೀ.ಗಡಿಯನ್ನು ಹಂಚಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು