ಗುರುವಾರ , ಮಾರ್ಚ್ 23, 2023
21 °C

ಒಂದೇ ಕೋವಿಡ್‌ ಪ್ರಕರಣ: ಶಾಂಘೈ ಡಿಸ್ನಿಲ್ಯಾಂಡ್‌ ಬಂದ್‌, 34,000 ಜನರ ಪರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ಶಾಂಘೈ: ಕೇವಲ ಒಂದೇ ಒಂದು ಕೋವಿಡ್‌ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಶಾಂಘೈನ ಡಿಸ್ನಿಲ್ಯಾಂಡ್ ಅನ್ನು ಸೋಮವಾರ ಸಂಪೂರ್ಣ ಮುಚ್ಚಲಾಗಿತ್ತು. ಒಳಗೆ ಬರುವವರನ್ನು ನಿರ್ಬಂಧಿಸುವುದರ ಜೊತೆಗೆ, ಹೊರ ಹೋಗುವವರನ್ನು ತಡೆಯಲಾಯಿತು. ಕೋವಿಡ್‌ ಪರೀಕ್ಷೆ ನಡೆದ ನಂತರವೇ ಎಲ್ಲರನ್ನೂ ಹೊರಗೆ ಕಳುಹಿಸಲಾಗಿದೆ.

ಶನಿವಾರ ಉದ್ಯಾನವನಕ್ಕೆ ಭೇಟಿ ನೀಡಿದ್ದ ಮಹಿಳೆಯೊಬ್ಬರಿಗೆ ಕೋವಿಡ್‌ ಇರುವುದು ದೃಢವಾಗಿತ್ತು. ಹೀಗಾಗಿ ಭಾನುವಾರ ಡಿಸ್ನಿಲ್ಯಾಂಡ್ ಅನ್ನು ಏಕಾಏಕಿ ಮುಚ್ಚಲಾಯಿತು. ಇದರಿಂದ ಸಾವಿರಾರು ಜನ ಡಿಸ್ನಿಲ್ಯಾಂಡ್‌ನಲ್ಲೇ ಸಿಲುಕಿಕೊಳ್ಳಬೇಕಾಗಿ ಬಂತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೋಮವಾರ ಬೆಳಗ್ಗೆ ವರೆಗೆ ಡಿಸ್ನಿಲ್ಯಾಂಡ್‌ನಲ್ಲಿದ್ದ ಸುಮಾರು 34,000 ಜನರನ್ನು ಪರೀಕ್ಷಿಸಲಾಯಿತು. ನಂತರ, 220 ವಿಶೇಷ ಬಸ್‌ಗಳಲ್ಲಿ ಅವರನ್ನು ಅವರ ಮನೆಗಳಿಗೆ ಕಳುಹಿಸಲಾಯಿತು.

ಪರೀಕ್ಷೆಗೆ ಒಳಪಟ್ಟವರ ವರದಿಗಳು ನೆಗೆಟಿವ್‌ ಬಂದಿವೆ. ಆದರೂ, ಅವರು ಇನ್ನೂ ಎರಡು ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಎಂದು ಸೂಚಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು