ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಕೋವಿಡ್‌ ಉಲ್ಬಣ: ಒಂದೇ ದಿನ 32,943 ಹೊಸ ಪ್ರಕರಣ ದೃಢ

Last Updated 25 ನವೆಂಬರ್ 2022, 4:48 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.

ರಾಷ್ಟ್ರೀಯ ಆರೋಗ್ಯ ಆಯೋಗದ ವರದಿ ಪ್ರಕಾರ, ಶುಕ್ರವಾರ 32,943 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 3,103 ರೋಗಲಕ್ಷಣಗಳು ಮತ್ತು 29,840 ಲಕ್ಷಣ ರಹಿತ ಪ್ರಕರಣಗಳಿವೆ ಎಂದು ಹೇಳಿದೆ. 2019ರಿಂದ ಈವರೆಗೆ ಒಂದೇ ದಿನ ದಾಖಲಾದ ಅತಿಹೆಚ್ಚು ಪ್ರಕರಣ ಇದಾಗಿದೆ.

ಗುರುವಾರ ಚೀನಾದಲ್ಲಿ 31,444 ಪ್ರಕರಣ ದಾಖಲಾಗಿದ್ದವು. ಹೊಸದಾಗಿ ಯಾವುದೇ ಸಾವು ಪ್ರಕರಣಗಳು ವರದಿಯಾಗಿಲ್ಲ.

ಸುಮಾರು 66 ಲಕ್ಷ ಜನಸಂಖ್ಯೆ ಇರುವ ಝೇಂಗ್‌ಝೌ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ಐದು ದಿನ ಲಾಕ್‌ಡೌನ್‌ ಘೋಷಿಸಲಾಗಿದೆ. ಆಹಾರ ಖರೀದಿ ಮತ್ತು ತುರ್ತು ಸಂದರ್ಭ ಹೊರತುಪಡಿಸಿ ಹೊರಗೆ ಬರದಂತೆ ಜನರಿಗೆ ಸೂಚಿಸಲಾಗಿದೆ.

ಕೋವಿಡ್‌ ಕಠಿಣ ನಿರ್ಬಂಧ ವಿರೋಧಿಸಿ ಝೆಂಗ್‌ಝೌನಲ್ಲಿ ಕಾರ್ಖಾನೆಗಳ ನೌಕರರು ಪೊಲೀಸರು ಸಂಘರ್ಷ ನಡೆಸಿದ್ದು, ಪ್ರತಿಯಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರವನ್ನು ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT