ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ–ರಷ್ಯಾದಿಂದ ಚಂದ್ರನ ಸಂಶೋಧನಾ ಕೇಂದ್ರ ನಿರ್ಮಾಣ

Last Updated 10 ಮಾರ್ಚ್ 2021, 10:13 IST
ಅಕ್ಷರ ಗಾತ್ರ

ಬಿಜೀಂಗ್‌: ರಷ್ಯಾ ಮತ್ತು ಚೀನಾಗಳು ಚಂದ್ರನ ಮೇಲ್ಮೈಯಲ್ಲಿ ಚಂದ್ರನ ಸಂಶೋಧನಾ ಕೇಂದ್ರವನ್ನು ಜಂಟಿಯಾಗಿ ನಿರ್ಮಿಸಲಿದ್ದು, ಈ ಮೂಲಕ ಹೊಸ ಬಾಹ್ಯಾಕಾಶ ಸಂಬಂಧವನ್ನು ಪ್ರಾರಂಭಿಸಲಿವೆ.

ಅಂತರರಾಷ್ಟ್ರೀಯ ಚಂದ್ರ ಸಂಶೋಧನಾ ಕೇಂದ್ರವನ್ನು (ಐಎಲ್‌ಎಸ್‌ಎಸ್‌) ಇತರೆ ರಾಷ್ಟ್ರಗಳು ಸಹ ಬಳಸಬಹುದು ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತವು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಆದರೆ ಈ ಸಂಶೋಧನಾ ಕೇಂದ್ರವನ್ನು ಯಾವಾಗ ನಿರ್ಮಾಣ ಮಾಡಲಾಗುವುದು ಎಂಬುದನ್ನು ತಿಳಿಸಿಲ್ಲ.

ಈ ಸಂಶೋಧನಾ ಕೇಂದ್ರವನ್ನು ಚಂದ್ರನ ಮೇಲ್ಮೈ ಅಥವಾ ಚಂದ್ರನ ಕಕ್ಷೆಯಲ್ಲಿ ನಿರ್ಮಿಸಲಾಗುವುದು. ಇಲ್ಲಿ ಚಂದ್ರನ ಪರಿಶೋಧನೆ ಮತ್ತು ಉಪಯೋಗ, ಚಂದ್ರ ಆಧಾರಿತ ಅವಲೋಕನ, ಮೂಲ ವೈಜ್ಞಾನಿಕ ಪ್ರಯೋಗ ಮತ್ತು ತಾಂತ್ರಿಕ ಪರಿಶೀಲನೆಗಳನ್ನು ನಡೆಸಲಾಗುವುದು ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತದ ಆಡಳಿತಾಧಿಕಾರಿ ಜಾಂಗ್ ಕಾಜಿಯನ್‌ ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೊಸ್ಕೊಸ್ಮೊಸ್‌ನ ಮುಖ್ಯಸ್ಥ ಡಿಮಿಟ್ರಿ ರೋಗೊಜಿನ್ ಅವರು ಮಂಗಳವಾರ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT