ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದೊಂದಿಗಿನ ಬಾಂಧವ್ಯ ದೃಢವಾಗಿದೆ: ಚೀನಾ

Last Updated 7 ಮಾರ್ಚ್ 2022, 11:08 IST
ಅಕ್ಷರ ಗಾತ್ರ

ಬೀಜಿಂಗ್:ರಷ್ಯಾದೊಂದಿಗಿನ ಸ್ನೇಹ ಬಾಂಧವ್ಯವು ದೃಢವಾಗಿದ್ದು, ದ್ವಿಪಕ್ಷೀಯ ಸಹಯೋಗವು ವಿಸ್ತಾರವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಸೋಮವಾರ ತಿಳಿಸಿದ್ದಾರೆ.

ಅಲ್ಲದೆ ಅಗತ್ಯವಿದ್ದಾಗ ಮಧ್ಯಸ್ಥಿಕೆಯನ್ನು ಕೈಗೊಳ್ಳಲು ಹಾಗೂ ಅಂತರಾಷ್ಟ್ರೀಯ ಸಮುದಾಯದೊಂದಿಗೆ ಕೆಲಸ ಮಾಡಲು ಚೀನಾ ಸಿದ್ಧವಿದೆ ಎಂದು ಹೇಳಿದ್ದಾರೆ.

ಉಕ್ರೇನ್ ಮೇಲೆ 'ವಿಶೇಷ ಸೇನಾ ಕಾರ್ಯಾಚರಣೆ' ನಡೆಸಿರುವ ರಷ್ಯಾ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿರುವ ಪಾಶ್ಚಿಮಾತ್ಯ ರಾಷ್ಟ್ರಗಳು, ಸಾಲು ಸಾಲು ನಿರ್ಬಂಧಗಳನ್ನು ಹೇರಿವೆ.

ಈ ನಡುವೆ ತಟಸ್ಥ ನಿಲುವು ತಳೆದಿರುವ ಚೀನಾ, ರಷ್ಯಾದೊಂದಿಗಿನ ಸ್ನೇಹ ಬಾಂಧವ್ಯವನ್ನು ಭದ್ರಪಡಿಸಿದೆ.

ಈ ಮೊದಲು ರಷ್ಯಾ-ಬಿಕ್ಕಟ್ಟನ್ನು ಬಗೆಹರಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಶಾಂತಿ ಮಾತುಕತೆಗೆ ಚೀನಾ ಮುಂದಾಗಬೇಕು ಎಂದು ಐರೋಪ್ಯ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಪ್ ಬೊರೆಲ್ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT