ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಜಿಲ್‌ನಿಂದ ಚೀನಾಗೆ ಬಂದ ಕೋಳಿ ಮಾಂಸದಲ್ಲಿ ಕೊರೊನಾ ವೈರಸ್ ಪತ್ತೆ

Last Updated 13 ಆಗಸ್ಟ್ 2020, 15:04 IST
ಅಕ್ಷರ ಗಾತ್ರ

ಬೀಜಿಂಗ್: ಬ್ರೆಜಿಲ್‌ನಿಂದ ಆಮದು ಮಾಡಿಕೊಂಡ ಕೋಳಿ ಮಾಂಸದಲ್ಲಿ ಕೊರೊನಾ ವೈರಾಣುಗಳು ಪತ್ತೆಯಾಗಿವೆ ಎಂದು ಚೀನಾದ ಶೆನ್‌ಜಾನ್‌ ನಗರದ ಸ್ಥಳೀಯ ಆಡಳಿತ ಗುರುವಾರ ಹೇಳಿದೆ.

ಚೀನಾದ ವುಹು ನಗರದಲ್ಲಿ ಈಕ್ವೆಡಾರ್‌ನಿಂದ ಆಮದು ಮಾಡಿಕೊಂಡಿದ್ದ ಶೀತಲೀಕೃತ ಸಿಗಡಿಗಳ ಪ್ಯಾಕೇಜ್‌ಗಳ ಮೇಲೆ ಕೊರೊನಾ ವೈರಾಣುಗಳು ಬುಧವಾರವಷ್ಟೇಪತ್ತೆಯಾಗಿದ್ದವು.

ಎರಡೂ ಉತ್ಪನ್ನಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದ ಹಲವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಬರಲಿಲ್ಲಎಂದು ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿ ವರದಿ ಮಾಡಿದೆ.

ಬೀಜಿಂಗ್‌ನಲ್ಲಿ ವರದಿಯಾದ ಸೋಂಕು ಪ್ರಕರಣಗಳಿಗೆ ಸಾಗರ ಉತ್ಪನ್ನಗಳ ಮಾರುಕಟ್ಟೆಯ ನಂಟು ಇರುವುದು ದೃಢಪಟ್ಟ ನಂತರ ಎಲ್ಲ ರೀತಿಯ ಮಾಂಸದಮೇಲ್ಪದರದ ನಮೂನೆಗಳನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸುವ ನಿಯಮವನ್ನುಚೀನಾ ಜಾರಿಮಾಡಿದೆ. ಅದರಂತೆ ನಡೆದ ತಪಾಸಣೆಗಳಲ್ಲಿ ವೈರಾಣುಗಳು ಇರುವುದು ಪತ್ತೆಯಾಗಿದೆ.

ಬ್ರೆಜಿಲ್‌ನಿಂದ ಬಂದಿದ್ದ ಕೋಳಿ ಮಾಂಸದಲ್ಲಿ ವೈರಾಣುಗಳು ಪತ್ತೆಯಾದವಿಚಾರದ ಬಗ್ಗೆ ಬ್ರೆಜಿಲ್ ಸರ್ಕಾರವಾಗಲಿ ಅಥವಾ ಚೀನಾದಲ್ಲಿರುವ ಬ್ರೆಜಿಲ್ ರಾಯಭಾರಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

'ವಿದೇಶಗಳಿಂದ ಆಮದು ಮಾಡಿಕೊಂಡ ಮಾಂಸದ ಉತ್ಪನ್ನಗಳನ್ನು ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಸೋಂಕಿನ ಸಾಧ್ಯತೆ ಕಡಿಮೆ ಮಾಡಲು ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು' ಎಂದು ಶೆನ್‌ಜೆನ್ ನಗರಾಡಳಿತ ಜನರಲ್ಲಿ ಮನವಿ ಮಾಡಿದೆ.

ಆಹಾರ ಉತ್ಪನ್ನಗಳು ಅಥವಾ ಪ್ಯಾಕ್‌ ಮಾಡಲುಬಳಸುವ ಉತ್ಪನ್ನಗಳ ಮೇಲೆ ಕೊರೊನಾ ವೈರಾಣುಗಳು ಸೇರಬಲ್ಲವು. ಆದರೆ ಸಂತಾನಾಭಿವೃದ್ಧಿ ಸಾಧ್ಯತೆ ಕಡಿಮೆ. ಸಾಮಾನ್ಯ ವಾತಾವರಣದಲ್ಲಿ ಈ ವೈರಾಣುಗಳು ಹೆಚ್ಚು ಕಾಲ ಬದುಕುವುದಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಕೋಲ್ಡ್‌ ಸ್ಟೋರೇಜ್‌ನಲ್ಲಿ ಸಂಗ್ರಹಿಸಿದ ಆಹಾರವು ಮುಂದೊಂದು ದಿನ ಕೊರೊನಾ ಸೋಂಕು ಹರಡುವ ಅಪಾಯವನ್ನು ತಳ್ಳಿಹಾಕಲು ಆಗುವುದಿಲ್ಲ ಎಂದು ಚೀನಾದ ಆಹಾರ ಸುರಕ್ಷತಾ ಪ್ರಯೋಗಾಲಯದ ಮುಖ್ಯಸ್ಥ ಲಿ ಫೆಂಗ್ವಿನ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT