ಬೀಜಿಂಗ್: ಕಠಿಣ ಎಚ್ಚರಿಕೆ ಲೆಕ್ಕಿಸದೇ ತೈವಾನ್‌ಗೆ ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ನೀಡಿದ್ದಕ್ಕೆ ಕುಪಿತಗೊಂಡಿರುವ ಚೀನಾ, ‘ಒಂದೇ ಚೀನಾ ನೀತಿ’ ಉಲ್ಲಂಘಿಸಿರುವ ಅಮೆರಿಕ ಮತ್ತು ತೈವಾನ್ ವಿರುದ್ಧ ‘ಕಠಿಣ ಮತ್ತು ಪರಿಣಾಮಕಾರಿ’ ಪ್ರತೀಕಾರದ ಕ್ರಮ ತೆಗೆದುಕೊಳ್ಳುವುದಾಗಿ ಬುಧವಾರ ಗುಡುಗಿದೆ.

ಪೆಲೋಸಿ ಅವರ ತೈವಾನ್ ಭೇಟಿಯನ್ನು ಕಟುವಾಗಿ ವಿರೋಧಿಸಿರುವ ಚೀನಾ ವಿದೇಶಾಂಗ ಸಚಿವಾಲಯ ‘ಅಮೆರಿಕ ಪ್ರಚೋದಿಸುವ ರಾಷ್ಟ್ರವಾಗಿದೆ. ಅದಕ್ಕೆ ಚೀನಾ ಬಲಿಪಶು’ ಎಂದು ಕಿಡಿಕಾರಿದೆ.

ತೈವಾನ್ ದ್ವೀಪದ ಸುತ್ತ ಸೇನಾ ತಾಲೀಮು ನಡೆಸುವ ಘೋಷಣೆ, ತೈಪೆಯಿಂದ ಕೆಲವು ಆಹಾರ ಆಮದು ನಿಷೇಧ, ಅಮೆರಿಕದ ವಿರುದ್ಧ ರಾಜತಾಂತ್ರಿಕ ಪ್ರತಿಭಟನೆಗಳನ್ನು ದಾಖಲಿಸಿದ ಜತೆಗೆ ಇನ್ನೂ ಏನೆಲ್ಲಾ ಹೆಚ್ಚುವರಿ ಕ್ರಮ ತೆಗೆದುಕೊಳ್ಳಲಾಗುವುದೆಂಬ ಪ್ರಶ್ನೆಗಳಿಗೆ ಮಾಧ್ಯಮಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ನ್ಯಾನ್ಸಿ ಪೆಲೋಸಿ ಮತ್ತು ತೈವಾನ್ ಅಧ್ಯಕ್ಷೆ ಸಾಯ್ ಇಂಗ್-ವೆನ್ ಅವರ ವಿರುದ್ಧ ನಿರ್ಬಂಧ ಹೇರುವ ಯೋಜನೆ ಇದೆಯೇ ಎಂದು ಕೇಳಿದ ಮತ್ತೊಂದು ಪ್ರಶ್ನೆಗೆ ‘ಸ್ವಲ್ಪ ತಾಳ್ಮೆ ವಹಿಸಿ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ. ನಮ್ಮ ಪ್ರತ್ಯುತ್ತರದ ಕ್ರಮಗಳು ಅತ್ಯಂತ ಕಠಿಣ ಮತ್ತು ಪರಿಣಾಮಕಾರಿಯಾಗಿರಲಿವೆ’ ಎಂದು ಚೀನಾದ ಸಹಾಯಕ ವಿದೇಶಾಂಗ ಸಚಿವರೂ ಆಗಿರುವ ಹುವಾ ಅವರು ಮಾಧ್ಯಮಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಗುಡುಗಿದ್ದಾರೆ.

ಅಮೆರಿಕದ ಕಾಂಗ್ರೆಸ್ ನಿಯೋಗದೊಂದಿಗೆ ತೈವಾನ್ ರಾಜಧಾನಿ ತೈಪೆಗೆ ಮಂಗಳವಾರ ರಾತ್ರಿ ವಾಯುಪಡೆ ವಿಮಾನದಲ್ಲಿ ಬಂದಿಳಿದಿದ್ದ ನ್ಯಾನ್ಸಿ ಪೆಲೋಸಿ ಅವರು ತೈವಾನ್ ಅಧ್ಯಕ್ಷರು ಹಾಗೂ ಉನ್ನತ ರಾಜತಾಂತ್ರಿಕರೊಂದಿಗೆ ಮಹತ್ವದ ಸಭೆಗಳನ್ನು ನಡೆಸಿ, ಸಂವಾದ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಬುಧವಾರ ಅಮೆರಿಕಕ್ಕೆ ಹಿಂತಿರುಗಿದರು.

ಇದರ ಬೆನ್ನಲ್ಲೇ ಚೀನಾ ತೈವಾನ್ ಮೇಲೆ ವ್ಯಾಪಾರ ನಿರ್ಬಂಧ ಹೇರುವ ಮೂಲಕ ಪ್ರತೀಕಾರಕ್ಕೆ ಇಳಿದಿದೆ. ಪೆಲೋಸಿ ಅವರ ಭೇಟಿ ವೇಳೆಯೇ ಚೀನಾ, ದ್ವೀಪರಾಷ್ಟ್ರ ತೈವಾನ್ ಸುತ್ತಲೂ ಸೇನಾ ತಾಲೀಮು ಮತ್ತು ಕ್ಷಿಪಣಿ ಪರೀಕ್ಷೆಯ ಘೋಷಣೆ ಹೊರಡಿಸಿತ್ತು.

ಚೀನಾದ ವಿದೇಶಾಂಗ ಸಚಿವ ಷಿ ಫೆಂಗ್ ಅವರು ಮಂಗಳವಾರ ತಡರಾತ್ರಿ ಅಮೆರಿಕ ರಾಯಭಾರಿ ನಿಕೋಲಸ್ ಪೂರನ್ ಅವರನ್ನು ತುರ್ತು ಕರೆಸಿಕೊಂಡು ಪೆಲೋಸಿ ಭೇಟಿ ವಿರೋಧಿಸಿ ತೀವ್ರ ಪ್ರತಿಭಟನೆ ದಾಖಲಿಸಿದ್ದರು.

ಪ್ರಜಾಪ್ರಭುತ್ವ ರಕ್ಷಿಸಲು ಕಟಿಬದ್ಧ: ಅಮೆರಿಕ ಪ್ರತಿಜ್ಞೆ

ಚೀನಾದ ಸೇನಾ ಪ್ರತಿಕ್ರಿಯೆ ಮತ್ತು ಆಕ್ರೋಶದ ಎಚ್ಚರಿಕೆ ಸೊಪ್ಪು ಹಾಕದೆ ತೈವಾನ್‌ಗೆ ಭೇಟಿ ನೀಡಿದ ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಸ್ವದೇಶಕ್ಕೆ ಹಿಂತಿರುಗುವ ಮೊದಲು,ಜಾಗತಿಕ ಒಗ್ಗಟ್ಟು ಮತ್ತು ಪ್ರಜಾಪ್ರಭುತ್ವ ರಕ್ಷಣೆಯ ಪ್ರತಿಜ್ಞೆ ಮಾಡಿದರು.

ಪ್ರಜಾಪ್ರಭುತ್ವದಡಿ ಸ್ವತಂತ್ರ ಆಡಳಿತ ನಡೆಸುತ್ತಿರುವ ತೈವಾನ್ ಒಬ್ಬಂಟಿಯಲ್ಲ. ತೈವಾನ್ ಮತ್ತು ವಿಶ್ವದೆಲ್ಲೆಡೆ ಪ್ರಜಾಪ್ರಭುತ್ವ ರಕ್ಷಿಸಲು ಅಮೆರಿಕ ಬದ್ಧವಾಗಿದೆ ಎಂಬ ಸಂದೇಶ ಸಾರಿದರು.

‘ಉದ್ದೇಶಪೂರ್ವಕ ಸೇನಾ ಬೆದರಿಕೆಗಳು ಎದುರಾಗಿದ್ದರೂ ಇದಕ್ಕೆ ತೈವಾನ್ ಹಿಂಜರಿಯುವುದಿಲ್ಲ. ಪ್ರಜಾಪ್ರಭುತ್ವದ ರಕ್ಷಣೆಯನ್ನು ನಾವು ಮುಂದುವರಿಸುತ್ತೇವೆ. ದೇಶದಲ್ಲಿನ 2.3 ಕೋಟಿ ಜನರು ಹೇಡಿಗಳಲ್ಲ’ ಎಂದು ಅಧ್ಯಕ್ಷೆಸಾಯ್ ಇಂಗ್ –ವೆನ್ ಅವರು ಪೆಲೋಸಿ ಅವರ ಜತೆಗಿನ ಸಂವಾದದಲ್ಲಿ ಹೇಳಿದರು.

ಪೆಲೋಸಿ ಬಂದು ಹೋದ ಮೇಲೆ...

*ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ತೈವಾನ್‌ಗೆ ಬೆದರಿಕೆಯೊಡ್ಡುವಂತೆ ಚೀನಾ ಅಪಾಯಕಾರಿ ರೀತಿಯಲ್ಲಿ ಸೇನಾ ತಾಲೀಮು ನಡೆಸುತ್ತಿದೆ

* ಪೆಲೋಸಿ ಭೇಟಿಯಿಂದ ಆಕ್ರೋಶಗೊಂಡಿರುವ ಚೀನಾ ಮುಂಬರುವ ವಾರಗಳಲ್ಲಿ ದೈನಂದಿನ ತಾಲೀಮಾಗಿ ತೈವಾನ್ ಮೇಲೆ ಡ್ರೋನ್‌ಗಳ ಹಾರಾಟ ನಡೆಸಬಹುದು– ಸೇನಾ ತಜ್ಞರ ವಿಶ್ಲೇಷಣೆ

* ಬೃಹತ್ ಸೇನಾ ತಾಲೀಮಿನಿಂದ ತೈವಾನ್ ದ್ವೀಪ ದಿಗ್ಬಂಧನಕ್ಕೆ ಸಿಲುಕಲಿದೆ. ದ್ವೀಪದ ವಿರುದ್ಧ ಬೀಜಿಂಗ್‌ನ ಸೇನಾ ಕಾರ್ಯಾಚರಣೆಗಳಲ್ಲಿ ಪ್ರಗತಿಯಾಗಿದೆ–ಚೀನಾ ವಾಯು ಪಡೆಯ ನಿವೃತ್ತ ಅಧಿಕಾರಿ ಫು ಕಿನ್‌ಸಾಹೊ

* ಈ ಪ್ರದೇಶದಲ್ಲಿ ಅಮೆರಿಕ ಮತ್ತು ತೈವಾನ್ ವಾಯುಪಡೆಗಳ ಪ್ರತಿಕ್ರಿಯೆಗೆ ಚೀನಾ ವಾಯು ಪಡೆಯೂ ಪ್ರತ್ಯುತ್ತರಕ್ಕೆ ಸಜ್ಜು. ಗುರುವಾರದ ಸೇನಾ ತಾಲೀಮು ಗಮನಿಸಿದರೆ, ತೈವಾನಿನ ಜಲಗಡಿಗೆ ಚೀನಾದ ಮಾನ್ಯತೆ ಇಲ್ಲ – ಕಿನ್‌ಸಾಹೊ

* ತೈವಾನ್‌ಗೆ ಚೀನಾದಿಂದ ನೈಸರ್ಗಿಕ ಮರಳು ರಫ್ತು ರದ್ದಾಗಿದೆ

* ತೈವಾನ್‌ನ ಹಣ್ಣುಗಳು, ಮೀನು ಉತ್ಪನ್ನಗಳ ಆಮದಿಗೆ ನಿರ್ಬಂಧ

* ಬಿಸ್ಕೆಟ್, ಪೇಸ್ಟ್ರೀಸ್ ಸೇರಿ ತೈವಾನ್‌ನ 35 ರಫ್ತುದಾರರಿಗೆ ಚೀನಾ ಕೊಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.