ಶುಕ್ರವಾರ, ಆಗಸ್ಟ್ 6, 2021
21 °C

ಟಿಬೆಟ್‌ನಲ್ಲಿ ಶೀಘ್ರ ಪ್ರಥಮ ವಿದ್ಯುತ್ ಚಾಲಿತ ರೈಲುಸೇವೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ಚೀನಾವು ಟಿಬೆಟ್‌ನಲ್ಲಿ ತನ್ನ ಪ್ರಥಮ ವಿದ್ಯುತ್‌ ಚಾಲಿತ ರೈಲು ಸೇವೆಯನ್ನು ಚಾಲನೆ ಗೊಳಿಸಲಿದ್ದು, ರೈಲು ಲಾಸಾ ಮತ್ತು ಗಡಿ ಭಾಗದ ನಿಯಿಂಗ್ಚಿ ನಡುವೆ ಸಂಚರಿಸಲಿದೆ.

ಒಟ್ಟು 435.5 ಕಿ.ಮೀ ಅಂತರದ ಈ ಮಾರ್ಗ ಸಿಚುನ್‌ –ಟಿಬೆಟ್‌ ರೈಲ್ವೆ ವಲಯದಲ್ಲಿದೆ. ಆಡಳಿತ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಚೀನಾದ (ಸಿಪಿಸಿ) ಶತಮಾನೋತ್ಸವ ನಿಮಿತ್ತ ಜುಲೈ 1ರಂದು ಆರಂಭವಾಗುವ ಸಂಭವವಿದೆ.

ವಿದ್ಯುತ್‌ ಸರಬರಾಜು ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಪರೀಕ್ಷಾರ್ಥ ಸೇವೆಯೂ ಪೂರ್ಣಗೊಂಡಿದೆ ಎಂದು ಇಲಾಖೆಯ ಚೀಫ್‌ ಎಂಜಿನಿಯರ್‌ ಲಿಯು ಯುಕ್ಸಿಯಾಂಗ್‌ ಅವರು ತಿಳಿಸಿದ್ದಾರೆ.

ಸಿಚುನ್‌ –ಟಿಬೆಟ್‌ ರೈಲ್ವೆಯು ಟಿಬೆಟ್‌ನ ಎರಡನೇ ರೈಲ್ವೆ ಮಾರ್ಗವಾಗಿದ್ದು, ವಿಶ್ವದಲ್ಲಿಯೇ ಹೆಚ್ಚು ಚಟುವಟಿಕೆ ಇರುವ ಪ್ರದೇಶಗಳಲ್ಲಿ ಒಂದಾದ ಕ್ವಿಂಗಾಯ್‌ –ಟಿಬೆಟ್‌ ಪ್ರಾಂತ್ಯದಲ್ಲಿ ಹಾದುಹೋಗಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು